ನೆಹೆಮಿಯ 12:27

ಯೆರೂಸಲೇಮಿನ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ ಸ್ತುತಿಗಳಿಂದಲೂ ಹಾಡುವದರಿಂದಲೂ ತಾಳಗಳಿಂದಲೂ ವೀಣೆಗಳಿಂದಲೂ ಕಿನ್ನರಿಗಳಿಂದಲೂ ಪ್ರತಿಷ್ಠೆಯನ್ನು ಸಂತೋಷವಾಗಿ ಆಚರಿಸುವದಕ್ಕೆ ಲೇವಿ ಯರನ್ನು ಯೆರೂಸಲೇಮಿಗೆ ಬರಮಾಡುವ ನಿಮಿತ್ತವಾಗಿ ಅವರನ್ನು ಅವರ ಸಮಸ್ತ ಸ್ಥಳಗಳಲ್ಲಿ ಹುಡುಕಿದರು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 12

25ಮತ್ತನ್ಯನೂ ಬಕ್ಬುಕ್ಯನೂ ಒಬದ್ಯನೂ ಮೆಷುಲ್ಲಾಮನೂ ಟಲ್ಮೋ ನನೂ ಅಕ್ಕೂಬನೂ ಬೊಕ್ಕಸಗಳ ಬಾಗಲುಗಳನ್ನು ಕಾಯುವವರಾಗಿದ್ದರು.

26ಯೋಚಾದಾಕನ ಮಗ ನಾದ ಯೇಷೂವನ ಮಗನಾದ ಯೋಯಾಕೀಮನ ದಿವಸಗಳಲ್ಲಿಯೂ ಅಧಿಪತಿಯಾದ ನೆಹೆವಿಾಯನ ದಿವಸಗಳಲ್ಲಿಯೂ ಶಾಸ್ತ್ರಿಯೂ ಯಾಜಕನೂ ಆದ ಎಜ್ರನ ದಿವಸಗಳಲ್ಲಿಯೂ ಇವರು ಇದ್ದರು.

27ಯೆರೂಸಲೇಮಿನ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ ಸ್ತುತಿಗಳಿಂದಲೂ ಹಾಡುವದರಿಂದಲೂ ತಾಳಗಳಿಂದಲೂ ವೀಣೆಗಳಿಂದಲೂ ಕಿನ್ನರಿಗಳಿಂದಲೂ ಪ್ರತಿಷ್ಠೆಯನ್ನು ಸಂತೋಷವಾಗಿ ಆಚರಿಸುವದಕ್ಕೆ ಲೇವಿ ಯರನ್ನು ಯೆರೂಸಲೇಮಿಗೆ ಬರಮಾಡುವ ನಿಮಿತ್ತವಾಗಿ ಅವರನ್ನು ಅವರ ಸಮಸ್ತ ಸ್ಥಳಗಳಲ್ಲಿ ಹುಡುಕಿದರು.

28ಹಾಡುಗಾರರ ಮಕ್ಕಳು ಯೆರೂಸಲೇಮಿನ ಸುತ್ತಲಿ ರುವ ಬೈಲಿನಿಂದಲೂ ನೆಟೋಫಾತ್ಯರ ಗ್ರಾಮಗ ಳಿಂದಲೂ

29ಬೇತ್ಹಗಿಲ್ಗಾಲನ ಮನೆಯಿಂದಲೂ ಗೆಬದ ಅಜ್ಮಾವೇತಿನ ಹೊಲಗಳಿಂದಲೂ ಕೂಡಿಕೊಂಡರು. ಯಾಕಂದರೆ ಹಾಡುಗಾರರು ತಮಗೋಸ್ಕರ ಯೆರೂ ಸಲೇಮಿನ ಸುತ್ತಲೂ ಗ್ರಾಮಗಳನ್ನು ಕಟ್ಟಿಸಿಕೊಂಡಿ ದ್ದರು.

ನೆಹೆಮಿಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी