ಯೆಹೆಜ್ಕೇಲನು 30:9

ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣ ಮಾಡಿ ನಿಶ್ಚಿಂತರಾದ ಐಥಿಯೋಪ್ಯರನ್ನು ಹೆದರಿಸುವರು; ಐಗುಪ್ತದ ದಿನದಲ್ಲಿ ಆದಹಾಗೆ ಅವರ ಮೇಲೆ ದೊಡ್ಡಬಾಧೆ ಉಂಟಾಗುವದು; ಇಗೋ, ಅದು ಬಂತು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 30

7ಆಗ ಅವರು ಹಾಳಾಗಿರುವ ದೇಶಗಳೊಳಗೆ ಹಾಳಾಗುವರು. ಅದರ ಪಟ್ಟಣ ಗಳು ಹಾಳಾದ ಪಟ್ಟಗಳ ಮಧ್ಯದಲ್ಲಿ ಇರುವವು.

8ನಾನು ಐಗುಪ್ತದಲ್ಲಿ ಬೆಂಕಿಯಿಟ್ಟಾಗ ಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆ ಅವರಿಗೆ ನಾನೇ ಕರ್ತನೆಂದು ತಿಳಿಯುವದು.

9ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣ ಮಾಡಿ ನಿಶ್ಚಿಂತರಾದ ಐಥಿಯೋಪ್ಯರನ್ನು ಹೆದರಿಸುವರು; ಐಗುಪ್ತದ ದಿನದಲ್ಲಿ ಆದಹಾಗೆ ಅವರ ಮೇಲೆ ದೊಡ್ಡಬಾಧೆ ಉಂಟಾಗುವದು; ಇಗೋ, ಅದು ಬಂತು.

10ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಐಗುಪ್ತದ ಜನಸಮೂಹವನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಕೊನೆಗಾಣಿಸುವೆನು.

11ಆ ದೇಶವನ್ನು ನಾಶಪಡಿಸುವದಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನೊಡನೆ ಬರ ಮಾಡುವೆನು. ಅವರು ಐಗುಪ್ತಕ್ಕೆ ವಿರೋಧವಾಗಿ ಕತ್ತಿ ಹಿರಿದು ದೇಶವನ್ನು ಹತವಾದವುಗಳಿಂದ ತುಂಬಿ ಸುವರು.

ಯೆಹೆಜ್ಕೇಲನು 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी