ಆದಿಕಾಂಡ 48:20

ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವ ದಿಸಿ--ನಿನ್ನಲ್ಲಿ ಇಸ್ರಾಯೇಲ್‌ ಆಶೀರ್ವದಿಸಲ್ಪಡು ವದು. ಎಫ್ರಾಯಾಮ್‌ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲೆಂದು ಹೇಳುವ ಹೇಳಿಕೆಯಾಗುವದು ಎಂದು ಹೇಳಿ ಎಫ್ರಾಯಾಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 48

18ಯೋಸೇಫನು ತನ್ನ ತಂದೆಗೆ--ನನ್ನ ಅಪ್ಪಾ, ಹಾಗಲ್ಲ, ಇವನೇ ಚೊಚ್ಚಲ ಮಗನು. ಇವನ ತಲೆಯ ಮೇಲೆ ಬಲಗೈ ಇಡು ಅಂದನು.

19ಅದಕ್ಕೆ ಅವನ ತಂದೆಯು ಒಪ್ಪದೆ--ನನಗೆ ತಿಳಿಯಿತು, ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವದಲ್ಲದೆ ಅವನು ದೊಡ್ಡವನಾ ಗುವನು. ಆದಾಗ್ಯೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತ ತಿಯು ಜನಾಂಗಗಳ ಸಮೂಹವಾಗುವದು ಅಂದನು.

20ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವ ದಿಸಿ--ನಿನ್ನಲ್ಲಿ ಇಸ್ರಾಯೇಲ್‌ ಆಶೀರ್ವದಿಸಲ್ಪಡು ವದು. ಎಫ್ರಾಯಾಮ್‌ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲೆಂದು ಹೇಳುವ ಹೇಳಿಕೆಯಾಗುವದು ಎಂದು ಹೇಳಿ ಎಫ್ರಾಯಾಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.

21ಆಗ ಇಸ್ರಾಯೇಲನು ಯೋಸೇಫನಿಗೆ--ಇಗೋ, ನಾನು ಸಾಯುತ್ತೇನೆ; ಆದರೆ ದೇವರು ನಿಮ್ಮ ಸಂಗಡವಿದ್ದು ನಿಮ್ಮನ್ನು ನಿಮ್ಮ ತಂದೆಗಳ ದೇಶಕ್ಕೆ ಮತ್ತೆ ಸೇರಿಸುವನು.

22ಇದಲ್ಲದೆ ನಾನು ನನ್ನ ಕತ್ತಿ ಬಿಲ್ಲುಗಳಿಂದ ಅಮೋರಿಯರ ವಶದಿಂದ ತಕ್ಕೊಂಡ ಒಂದು ಪಾಲನ್ನು ನಿನ್ನ ಸಹೋದರರಿಗಿಂತ ಹೆಚ್ಚಾಗಿ ನಿನಗೆ ಕೊಟ್ಟಿದ್ದೇನೆ ಅಂದನು.

ಆದಿಕಾಂಡ 48 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी