ಯಾಜಕಕಾಂಡ 19:11

ನೀವು ಕದಿಯಬಾರದು; ಒಬ್ಬರಿಗೊಬ್ಬರು ಸುಳ್ಳಾಡಿ ಮೋಸಮಾಡಬಾರದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 19

9ನೀವು ನಿಮ್ಮ ಭೂಮಿಯ ಪೈರನ್ನು ಕೊಯ್ಯುವಾಗ ನಿಮ್ಮ ಹೊಲದ ಮೂಲೆಗಳಲ್ಲಿ ಸಂಪೂರ್ಣವಾಗಿ ಕೊಯ್ಯಬಾರದು ಇಲ್ಲವೆ ನಿಮ್ಮ ಸುಗ್ಗಿಯ ಹಕ್ಕಲುಗಳನ್ನು ಕೂಡಿಸಬಾರದು.

10ನಿಮ್ಮ ದ್ರಾಕ್ಷೇ ತೋಟದಲ್ಲಿ ಹಕ್ಕಲಾಯಬಾರದು ಇಲ್ಲವೆ ಪ್ರತಿಯೊಂದು ದ್ರಾಕ್ಷೆ ಯನ್ನೂ ಕೂಡಿಸಬಾರದು; ನೀವು ಅವುಗಳನ್ನು ಬಡವ ರಿಗಾಗಿಯೂ ಪರಕೀಯರಿಗಾಗಿಯೂ ಬಿಟ್ಟುಬಿಡ ಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.

11ನೀವು ಕದಿಯಬಾರದು; ಒಬ್ಬರಿಗೊಬ್ಬರು ಸುಳ್ಳಾಡಿ ಮೋಸಮಾಡಬಾರದು.

12ಇದಲ್ಲದೆ ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣಮಾಡಬಾರದು ನಿಮ್ಮ ದೇವರ ಹೆಸರನ್ನು ಅಪವಿತ್ರಮಾಡಬಾರದು; ನಾನೇ ಕರ್ತನು.

13ನಿನ್ನ ನೆರೆಯವನನ್ನು ವಂಚಿಸಬಾರದು ಅವನನ್ನು ಸುಲುಕೊಳ್ಳಬಾರದು. ಕೂಲಿಯವನ ಕೂಲಿಯು ನಿನ್ನ ಬಳಿಯಲ್ಲಿ ಮುಂಜಾನೆಯ ವರೆಗೆ ಇರಬಾರದು.

ಯಾಜಕಕಾಂಡ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी