ಚೆಫನ್ಯ 3:7

ನಾನು--ನಿಶ್ಚಯವಾಗಿ ನೀನು ನನಗೆ ಭಯಪಟ್ಟು ಶಿಕ್ಷಣವನ್ನು ಹೊಂದುವಿ; ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ ಅವರ ನಿವಾಸವು ಕಡಿದು ಬಿಡಲ್ಪ ಡುವದಿಲ್ಲ; ಆದರೆ ಅವರು ಬೇಗನೆ ಎದ್ದು ತಮ್ಮ ಕ್ರಿಯೆಗಳನ್ನೆಲ್ಲಾ ಕೆಡಿಸಿಬಿಟ್ಟರು ಅಂದೆನು.

ಸಂದರ್ಭದೊಂದಿಗೆ ಓದಿ · ಚೆಫನ್ಯ 3

5ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು.

6ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ; ಅವುಗಳ ಗೋಪುರಗಳು ಹಾಳಾಗಿವೆ; ಅವರ ಬೀದಿಗಳನ್ನು ಯಾರೂ ಹಾದು ಹೋಗದ ಹಾಗೆ ಹಾಳು ಮಾಡಿದ್ದೇನೆ; ಅವುಗಳ ಪಟ್ಟಣಗಳು ನಾಶವಾದವು, ಹೀಗೆ ಅಲ್ಲಿ ಯಾವನೂ ಇರುವದಿಲ್ಲ, ಯಾವ ಮನುಷ್ಯನು ಅಲ್ಲಿ ವಾಸಿಸುವದೂ ಇಲ್ಲ.

7ನಾನು--ನಿಶ್ಚಯವಾಗಿ ನೀನು ನನಗೆ ಭಯಪಟ್ಟು ಶಿಕ್ಷಣವನ್ನು ಹೊಂದುವಿ; ಹೀಗೆ ನಾನು ಅವರಿಗೆ ಶಿಕ್ಷೆ ವಿಧಿಸಿದರೂ ಅವರ ನಿವಾಸವು ಕಡಿದು ಬಿಡಲ್ಪ ಡುವದಿಲ್ಲ; ಆದರೆ ಅವರು ಬೇಗನೆ ಎದ್ದು ತಮ್ಮ ಕ್ರಿಯೆಗಳನ್ನೆಲ್ಲಾ ಕೆಡಿಸಿಬಿಟ್ಟರು ಅಂದೆನು.

8ಆದದರಿಂದ ನಾನು ಕೊಳ್ಳೆಗೆ ಏಳುವ ದಿನದ ವರೆಗೂ ನನಗೆ ಕಾದುಕೊಳ್ಳಿರಿ; ಜನಾಂಗಗಳನ್ನು ಕೂಡಿಸುವದಕ್ಕೂ ರಾಜ್ಯಗಳನ್ನು ಒಟ್ಟು ಸೇರಿಸುವದಕ್ಕೂ ಅವುಗಳ ಮೇಲೆ ನನ್ನ ರೌದ್ರವನ್ನೂ ಕೋಪದ ಎಲ್ಲಾ ಉರಿಯನ್ನೂ ಹೊಯ್ಯುವದಕ್ಕೂ ತೀರ್ಮಾನಿಸಿಕೊಂಡಿದ್ದೇನೆ; ನನ್ನ ರೋಷದ ಬೆಂಕಿಯಿಂದ ಭೂಮಿಯೆಲ್ಲಾ ದಹಿಸ ಲ್ಪಡುವದು.

9ಆಗ ನಾನು ಶುದ್ಧ ಭಾಷೆಯನ್ನು ಜನಾಂಗಗಳಿಗೆ ತಿರುಗಿ ಕೊಡುವೆನು; ಅವರೆಲ್ಲರು ಕರ್ತನ ಹೆಸರಿನಲ್ಲಿ ಮೊರೆಯಿಟ್ಟು ಏಕ ಮನಸ್ಸಿನಿಂದ ಆತನಿಗೆ ಸೇವೆ ಮಾಡು ವರು.

ಚೆಫನ್ಯ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी