ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಏನೂ ಮಾಡುವದಿಲ್ಲ.
11ಅವರು ನಿನಗೆ ಬೋಧಿಸುವ ನ್ಯಾಯ ಪ್ರಮಾಣದ ಪ್ರಕಾರವೂ ಅವರು ನಿನಗೆ ಹೇಳುವ ತೀರ್ಪಿನ ಪ್ರಕಾರವೂ ನೀನು ಮಾಡಬೇಕು; ಅವರು ನಿನಗೆ ತಿಳಿಸುವ ವಾಕ್ಯವನ್ನು ಬಿಟ್ಟು ಎಡಕ್ಕಾದರೂ ಬಲಕ್ಕಾದರೂ ತೊಲಗಬಾರದು.
12ಅಲ್ಲಿ ನಿನ್ನ ದೇವ ರಾದ ಕರ್ತನಿಗೆ ಸೇವೆಮಾಡುವದಕ್ಕೆ ನಿಂತ ಯಾಜಕನ ಮಾತಾದರೂ ನ್ಯಾಯಾಧಿಪತಿಯ ಮಾತಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವ ದಾದರೆ ಆ ಮನುಷ್ಯನು ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು;
13ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಏನೂ ಮಾಡುವದಿಲ್ಲ.
14ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಪಡಿಸಿ ಕೊಂಡು ಅದರಲ್ಲಿ ವಾಸವಾಗಿರುವಾಗ--ನನ್ನ ಸುತ್ತ ಲಿರುವ ಎಲ್ಲಾ ಜನಾಂಗಗಳ ಹಾಗೆ ನನಗೆ ಅರಸ ನನ್ನು ಇಟ್ಟುಕೊಳ್ಳುತ್ತೇನೆಂದು ಹೇಳಿದರೆ
15ಹೇಗಾ ದರೂ ನಿನ್ನ ದೇವರಾದ ಕರ್ತನು ಆದುಕೊಳ್ಳು ವವನನ್ನು ನಿನಗೆ ಅರಸನನ್ನಾಗಿ ಇಟ್ಟು ಕೊಳ್ಳಬೇಕು; ನಿನ್ನ ಸಹೋದರರಲ್ಲಿಂದ ಒಬ್ಬನನ್ನು ನಿನಗೆ ಅರಸನ ನ್ನಾಗಿ ಇಟ್ಟುಕೊಳ್ಳಬೇಕು; ನಿನ್ನ ಸಹೋದರನಲ್ಲದ ಅನ್ಯನಾದ ಮನುಷ್ಯನನ್ನು ನಿನ್ನ ಮೇಲೆ ಇಟ್ಟು ಕೊಳ್ಳಬಾರದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ