ಯಾಜಕಕಾಂಡ 19:21

ಅವನು ಅಪರಾಧ ಬಲಿಯ ಟಗರಾದ ತನ್ನ ಅಪರಾಧ ಬಲಿಯನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಎದುರಿನಲ್ಲಿ ತರಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 19

19ನೀನು ನನ್ನ ನಿಯಮಗಳನ್ನು ಕೈಕೊಳ್ಳಬೇಕು. ನಿನ್ನ ಪಶುಗಳನ್ನು ಬೇರೆ ಜಾತಿಯೊಂದಿಗೆ ಕೂಡಗೊಡಿಸಬೇಡ; ನಿನ್ನ ಹೊಲದಲ್ಲಿ ಮಿಶ್ರಿತವಾದ ಬೀಜಗಳನ್ನು ಬಿತ್ತಬೇಡ. ಇದಲ್ಲದೆ ನಾರೂ ಉಣ್ಣೆಯೂ ಕೂಡಿಸಿದ ಬಟ್ಟೆ ನಿನ್ನ ಮೇಲೆ ಇರಬಾರದು.

20ಒಬ್ಬ ಗಂಡಸಿಗೆ ನಿಶ್ಚಿತವಾಗಿರುವ ದಾಸಿಯಾದ ಒಬ್ಬ ಸ್ತ್ರೀಯೊಂದಿಗೆ ಒಬ್ಬ ಮನುಷ್ಯನು ಸಂಗಮಿಸು ವದಕ್ಕಾಗಿ ಮಲಗಿದರೆ ಅವಳು ಬಿಡುಗಡೆಯನ್ನು ಹೊಂದಿರದಿದ್ದರೆ ಇಲ್ಲವೆ ಅವಳಿಗೆ ಸ್ವಾತಂತ್ರ್ಯತೆ ಕೊಡ ದಿದ್ದರೆ ಅವಳು ಕೊರಡೆಯಿಂದ ಹೊಡೆಯಲ್ಪಡ ಬೇಕು; ಅವರಿಗೆ ಮರಣ ವಿಧಿಸಬಾರದು. ಯಾಕಂದರೆ ಅವಳು ಬಿಡುಗಡೆಯಾಗಿರಲಿಲ್ಲ.

21ಅವನು ಅಪರಾಧ ಬಲಿಯ ಟಗರಾದ ತನ್ನ ಅಪರಾಧ ಬಲಿಯನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಎದುರಿನಲ್ಲಿ ತರಬೇಕು.

22ಅವನು ಮಾಡಿದ ಪಾಪಕ್ಕಾಗಿ ಅಪರಾಧ ಬಲಿಯಾಗಿರುವ ಟಗರಿನಿಂದ ಯಾಜಕನು ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು; ಆಗ ಅವನು ಮಾಡಿದ ಪಾಪವು ಅವನಿಗೆ ಕ್ಷಮಿಸಲ್ಪಡುವದು.

23ನೀವು ದೇಶದೊಳಗೆ ಬಂದು ಎಲ್ಲಾ ತರಹದ ಮರಗಳನ್ನು ಆಹಾರಕ್ಕೋಸ್ಕರ ನೆಟ್ಟಾಗ ಅದರ ಫಲ ವನ್ನು ನೀವು ಸುನ್ನತಿಯಿಲ್ಲದ್ದೆಂದು ಲೆಕ್ಕಿಸಬೇಕು; ಮೂರು ವರುಷಗಳ ವರೆಗೆ ಅದು ನಿಮಗೆ ಸುನ್ನತಿಯಿಲ್ಲದ್ದಾಗಿ ರುವದು; ಅದನ್ನು ತಿನ್ನಬಾರದು.

ಯಾಜಕಕಾಂಡ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी