ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
14ವಿಧವೆ ಯನ್ನಾಗಲಿ, ಬಿಡಲ್ಪಟ್ಟ ಸ್ತ್ರೀಯನ್ನಾಗಲಿ, ಅಪವಿತ್ರ ಳನ್ನಾಗಲಿ, ಇಲ್ಲವೆ ಸೂಳೆಯನ್ನಾಗಲಿ, ಇಂಥವರನ್ನು ಅವನು ತೆಗೆದುಕೊಳ್ಳಬಾರದು. ಆದರೆ ತನ್ನ ಸ್ವಂತ ಜನರಲ್ಲಿ ಒಬ್ಬ ಕನ್ನಿಕೆಯನ್ನು ತನಗೆ ಹೆಂಡತಿಯನ್ನಾಗಿ ತೆಗೆದುಕೊಳ್ಳಬೇಕು.
15ಇದಲ್ಲದೆ ಅವನು ತನ್ನ ಜನರೊಳಗೆ ತನ್ನ ಸಂತತಿಯನ್ನು ಅಪವಿತ್ರ ಮಾಡಬಾರದು. ಕರ್ತನಾದ ನಾನು ಅವನನ್ನು ಶುದ್ಧೀಕರಿಸುತ್ತೇನೆ.
16ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
17ಆರೋನನೊಂದಿಗೆ ಮಾತ ನಾಡಿ ಹೇಳಬೇಕಾದದ್ದೇನಂದರೆ--ನಿನ್ನ ಸಂತತಿಯು ಅವರ ವಂಶಾವಳಿಗಳಲ್ಲಿ ಯಾವನಿಗೆ ಯಾವದಾದರೂ ಕಳಂಕವಿರುವದಾದರೆ ಅವನು ತನ್ನ ದೇವರ ರೊಟ್ಟಿಯನ್ನು ಸಮರ್ಪಿಸುವದಕ್ಕಾಗಿ ಬರಬಾರದು.
18ಯಾವ ಮನುಷ್ಯನು ಕಳಂಕವುಳ್ಳವನಾಗಿರುತ್ತಾನೋ ಅಂದರೆ ಕಣ್ಣಿಲ್ಲದವನು ಇಲ್ಲವೆ ಕುಂಟನು ಚಪ್ಪಟೆ ಯಾದ ಮೂಗುಳ್ಳವನು ಹೆಚ್ಚಾದ ಅಂಗವುಳ್ಳವನು
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ