೨ ಅರಸುಗಳು 4:8

ಆ ಕಾಲದಲ್ಲಿ ಏನಾಯಿತಂದರೆ, ಎಲೀಷನು ಶೂನೇ ಮಿಗೆ ಹೋದನು. ಅಲ್ಲಿ ಘನವುಳ್ಳ ಒಬ್ಬ ಸ್ತ್ರೀಯು ಇದ್ದಳು. ಅವಳು ಅವನನ್ನು ರೊಟ್ಟಿ ತಿನ್ನಲು ಬಲವಂತ ಮಾಡಿದಳು. ಹಾಗೆಯೇ ಅವನು ಆ ಮಾರ್ಗವಾಗಿ ಹೋಗುವಾಗೆಲ್ಲಾ ಅಲ್ಲಿ ರೊಟ್ಟಿ ತಿನ್ನಲು ಹೋಗುತ್ತಿ ದ್ದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 4

6ಆ ಪಾತ್ರೆಗಳು ತುಂಬಿದ ತರುವಾಯ ಏನಾಯಿತಂದರೆ, ಅವಳು ತನ್ನ ಮಗನಿಗೆ--ಇನ್ನೊಂದು ಪಾತ್ರೆಯನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದಳು. ಅವನು ಅವಳಿಗೆ--ಇನ್ನು ಪಾತ್ರೆ ಇಲ್ಲ ಅಂದನು.

7ಆಗ ಎಣ್ಣೆಯುಕ್ಕುವದು ನಿಂತು ಹೋಯಿತು. ಆಗ ಅವಳು ಬಂದು ದೇವರ ಮನುಷ್ಯನಿಗೆ ತಿಳಿಸಿದಳು. ಅವನು--ನೀನು ಹೋಗಿ ಆ ಎಣ್ಣೆಯನ್ನು ಮಾರಿ ನಿನ್ನ ಸಾಲವನ್ನು ತೀರಿಸಿ ಮಿಕ್ಕದ್ದರಿಂದ ನೀನೂ ನಿನ್ನ ಮಕ್ಕಳೂ ಜೀವನ ಮಾಡಿರಿ ಅಂದನು.

8ಆ ಕಾಲದಲ್ಲಿ ಏನಾಯಿತಂದರೆ, ಎಲೀಷನು ಶೂನೇ ಮಿಗೆ ಹೋದನು. ಅಲ್ಲಿ ಘನವುಳ್ಳ ಒಬ್ಬ ಸ್ತ್ರೀಯು ಇದ್ದಳು. ಅವಳು ಅವನನ್ನು ರೊಟ್ಟಿ ತಿನ್ನಲು ಬಲವಂತ ಮಾಡಿದಳು. ಹಾಗೆಯೇ ಅವನು ಆ ಮಾರ್ಗವಾಗಿ ಹೋಗುವಾಗೆಲ್ಲಾ ಅಲ್ಲಿ ರೊಟ್ಟಿ ತಿನ್ನಲು ಹೋಗುತ್ತಿ ದ್ದನು.

9ಆದದರಿಂದ ನನ್ನ ಗಂಡನಿಗೆ--ಇಗೋ, ನಮ್ಮ ಬಳಿಯಲ್ಲಿ ಯಾವಾಗಲೂ ಹಾದು ಹೋಗುವ ಇವನು ಪರಿಶುದ್ಧನಾದ ದೇವರ ಮನುಷ್ಯನಾಗಿದ್ದಾ ನೆಂದು ನನಗೆ ತಿಳಿಯುತ್ತದೆ.

10ನಾವು ಮಾಳಿಗೆಯ ಮೇಲೆ ಒಂದು ಚಿಕ್ಕ ಕೊಠಡಿಯನ್ನು ಕಟ್ಟಿಸಿ ಅದರಲ್ಲಿ ಅವನಿಗೋಸ್ಕರ ಮಂಚವನ್ನೂ ಮೇಜನ್ನೂ ಕುರ್ಚಿ ಯನ್ನೂ ದೀಪಸ್ತಂಭವನ್ನೂ ಇಡೋಣ. ಅವನು ನಮ್ಮ ಬಳಿಗೆ ಬರುವಾಗ ಅಲ್ಲಿ ಪ್ರವೇಶಿಸುವನು ಅಂದಳು.

೨ ಅರಸುಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी