ಇದಲ್ಲದೆ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನು ತನ್ನ ಮೇರೆಯನ್ನು ಕಟ್ಟಿ ಕೊಳ್ಳುವದಕ್ಕೆ ಹೋದಾಗ
1ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು.
2ಇದಲ್ಲದೆ ಅವನು ಮೋವಾಬ್ಯರನ್ನು ಹೊಡೆದು ಅವರನ್ನು ಹಗ್ಗದಿಂದ ಅಳೆದು ನೆಲಕ್ಕೆ ಬೀಳಮಾಡಿದನು; ಅವರನ್ನು ಕೊಲ್ಲುವದಕ್ಕೆ ಎರಡು ದಾರಗಳಿಂದ, ಜೀವದಲ್ಲಿಡುವದಕ್ಕೆ ಒಂದು ಪೂರ್ಣ ವಾದ ಹಗ್ಗದಿಂದ ಅಳೆದನು. ಹಾಗೆಯೇ ಮೋವಾಬ್ಯರು ದಾವೀದನಿಗೆ ದಾಸರಾಗಿ ಅವನಿಗೆ ಕಪ್ಪವನ್ನು ತಂದರು.
3ಇದಲ್ಲದೆ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನು ತನ್ನ ಮೇರೆಯನ್ನು ಕಟ್ಟಿ ಕೊಳ್ಳುವದಕ್ಕೆ ಹೋದಾಗ
4ದಾವೀದನು ಯೂಫ್ರೇ ಟಿಸ್ ನದಿಯ ಬಳಿಯಲ್ಲಿ ಅವನಿಗಿದ್ದ ಸಾವಿರ ರಥ ಗಳನ್ನೂ ಏಳು ನೂರು ಕುದುರೆ ರಾಹುತರನ್ನೂ ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಹಿಡಿದು ನೂರು ರಥಗಳಿಗೆ ತಕ್ಕ ಕುದುರೆಗಳನ್ನು ಉಳಿಸಿ ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ದುಬಿಟ್ಟನು.
5ಆದರೆ ದಮಸ್ಕದಲ್ಲಿರುವ ಅರಾಮ್ಯರು ಚೋಬದ ಅರಸನಾದ ಹದದೆಜೆರನಿಗೆ ಸಹಾಯಮಾಡುವದಕ್ಕೆ ಬಂದಾಗ ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದು ಹಾಕಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ