ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು.
44ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಕ್ಕುವಿಕೆಯಿಂದ ಬಲವಾದ ನಿವಾಸಕ್ಕೆ ಏರಿ ಬರುವನು; ಆದರೆ ನಾನು ಅವರನ್ನು ಕ್ಷಣಮಾತ್ರ ದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು, ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ಮತ್ತು ನನಗೆ ಕಾಲವನ್ನು ನೇಮಿಸುವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು?
45ಆದದರಿಂದ ಕರ್ತನು ಬಾಬೆಲಿಗೆ ವಿರೋಧವಾಗಿ ಮಾಡಿದ ಆಲೋ ಚನೆಯನ್ನೂ ಆತನು ಕಸ್ದೀಯರ ದೇಶಕ್ಕೆ ವಿರೋಧವಾಗಿ ಮಾಡಿದ ಯೋಚನೆಗಳನ್ನೂ ಕೇಳಿರಿ; ನಿಶ್ಚಯವಾಗಿ ಮಂದೆಯಲ್ಲಿ ಚಿಕ್ಕವುಗಳು ಅವರನ್ನು ಎಳೆಯುವವು; ನಿಶ್ಚಯವಾಗಿ ಅವರ ನಿವಾಸವನ್ನು ಅವರ ಸಂಗಡ ಹಾಳುಮಾಡುವನು.
46ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ