ವಿಮೋಚನಕಾಂಡ 39:3

ಅವರು ಚಿನ್ನವನ್ನು ಹೊಡೆದು ತೆಳುವಾದ ತಗಡುಗಳನ್ನಾಗಿಮಾಡಿ ಅದನ್ನು ಕತ್ತರಿಸಿ ತೆಳುವಾದ ಎಳೆಗಳನ್ನಾಗಿಮಾಡಿ ಆ ಎಳೆಗಳನ್ನೂ ನೀಲಿ ಧೂಮ್ರ ರಕ್ತವರ್ಣ ನಯವಾಗಿ ಹೊಸೆದ ನೂಲುಗಳೊಂದಿಗೆ ಸೇರಿಸಿ ಕಸೂತಿ ಕೆಲಸ ಮಾಡು ವದಕ್ಕೆ ಉಪಯೋಗಿಸುತ್ತಿದ್ದರು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 39

1ಕರ್ತನು ಮೋಶೆಗೆ ಆಜ್ಞಾಪಿಸಿದ ಮೇರೆಗೆನೀಲಿ ಧೂಮ್ರ ರಕ್ತವರ್ಣದ ನೂಲಿನಿಂದ ಪವಿತ್ರ ಆಲಯದ ಸೇವೆಮಾಡುವದಕ್ಕೆ ಸೇವಾ ವಸ್ತ್ರಗಳನ್ನೂ ಆರೋನನಿಗೆ ಪರಿಶುದ್ಧ ವಸ್ತ್ರಗಳನ್ನು ಮಾಡಿದರು.

2ಅವನು ಎಫೋದನ್ನು ಚಿನ್ನದಿಂದಲೂ ನೀಲಿ ಧೂಮ್ರ ಮತ್ತು ರಕ್ತವರ್ಣ ನಯವಾಗಿ ಹೊಸೆದ ನೂಲು ಇವುಗಳಿಂದ ಮಾಡಿದನು.

3ಅವರು ಚಿನ್ನವನ್ನು ಹೊಡೆದು ತೆಳುವಾದ ತಗಡುಗಳನ್ನಾಗಿಮಾಡಿ ಅದನ್ನು ಕತ್ತರಿಸಿ ತೆಳುವಾದ ಎಳೆಗಳನ್ನಾಗಿಮಾಡಿ ಆ ಎಳೆಗಳನ್ನೂ ನೀಲಿ ಧೂಮ್ರ ರಕ್ತವರ್ಣ ನಯವಾಗಿ ಹೊಸೆದ ನೂಲುಗಳೊಂದಿಗೆ ಸೇರಿಸಿ ಕಸೂತಿ ಕೆಲಸ ಮಾಡು ವದಕ್ಕೆ ಉಪಯೋಗಿಸುತ್ತಿದ್ದರು.

4(ಎಫೋದಕ್ಕೆ) ಜೋಡಿಸಲು ಹೆಗಲ ಪಟ್ಟಿಯನ್ನು ತಯಾರಿಸಿದರು; ಅದರ ಎರಡೂ ಅಂಚುಗಳು ಜೋಡಿಸಲ್ಪಟ್ಟಿದ್ದವು.

5ಅದರ ಮೇಲಿರುವ ವಿಚಿತ್ರವಾದ ಎಫೋದಿನ ನಡು ಕಟ್ಟು ಅದೇ ಕೆಲಸಕ್ಕನುಸಾರವಾಗಿ ಚಿನ್ನ ನೀಲಿ ಧೂಮ್ರ ರಕ್ತವರ್ಣ ಹೊಸೆದ ನಯವಾದ ನಾರುಗಳುಳ್ಳದ್ದಾಗಿದ್ದು ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇತ್ತು.

ವಿಮೋಚನಕಾಂಡ 39 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी