ಅದಕ್ಕೆ ಯೇಸು--ಅವನಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ನಮಗೆ ವಿರೋಧ ವಾಗಿರದವನು ನಮ್ಮ ಪಕ್ಷದವನೇ ಎಂದು ಹೇಳಿದನು.
48ಅವರಿಗೆ ಯಾವನಾದರೂ ಈ ಮಗುವನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿಕೊಂಡರೆ ನನ್ನನ್ನು ಅಂಗೀಕರಿಸಿಕೊಳ್ಳುತ್ತಾನೆ; ಯಾವನಾದರೂ ನನ್ನನ್ನು ಅಂಗೀಕರಿಸಿಕೊಂಡರೆ ನನ್ನನ್ನು ಕಳುಹಿಸಿ ಕೊಟ್ಟಾತನನ್ನೇ ಅಂಗೀಕರಿಸಿಕೊಳ್ಳುತ್ತಾನೆ. ಯಾಕಂ ದರೆ ನಿಮ್ಮೆಲ್ಲರಲ್ಲಿ ಚಿಕ್ಕವನಾಗಿರುವವನೇ ದೊಡ್ಡ
49ಆಗ ಯೋಹಾನನು--ಬೋಧಕನೇ, ಒಬ್ಬನು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವದನ್ನು ನಾವು ನೋಡಿ ಅವನಿಗೆ ಅಡ್ಡಿಮಾಡಿದೆವು; ಯಾಕಂದರೆ ಅವನು ನಮ್ಮೊಂದಿಗೆ (ನಿನ್ನನ್ನು) ಹಿಂಬಾಲಿ ಸುವದಿಲ್ಲ ಅಂದನು.
50ಅದಕ್ಕೆ ಯೇಸು--ಅವನಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ನಮಗೆ ವಿರೋಧ ವಾಗಿರದವನು ನಮ್ಮ ಪಕ್ಷದವನೇ ಎಂದು ಹೇಳಿದನು.
51ಇದಾದಮೇಲೆ ಯೇಸು ತಾನು ಮೇಲಕ್ಕೆ ಅಂಗೀ ಕರಿಸಲ್ಪಡುವ ಸಮಯವು ಬಂದಾಗ ಯೆರೂಸಲೇಮಿಗೆ ಹೋಗುವದಕ್ಕಾಗಿ ಆತನು ತನ್ನ ಮುಖವನ್ನು ದೃಢಮಾಡಿಕೊಂಡು
52ತನಗೆ ಮುಂದಾಗಿ ದೂತರನ್ನು ಕಳುಹಿಸಿದನು. ಅವರು ಹೋಗಿ ಆತನಿಗಾಗಿ ಸಿದ್ಧ ಪಡಿಸುವಂತೆ ಸಮಾರ್ಯದ ಒಂದು ಹಳ್ಳಿಯೊಳಕ್ಕೆ ಪ್ರವೇಶಿಸಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ