ಯೆಹೆಜ್ಕೇಲನು 22:3

ನೀನು ಹೇಳಬೇಕಾದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪಟ್ಟಣವು ಅದರ ಮಧ್ಯದಲ್ಲಿ ಅದರ ಕಾಲ ಬರುವ ಹಾಗೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧ ಮಾಡುವ ಹಾಗೆ ತನ್ನಲ್ಲಿ ವಿಗ್ರಹಗಳನ್ನು ಮಾಡಿಕೊಂಡಿದೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 22

1ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--

2ಈಗ ಮನುಷ್ಯ ಪುತ್ರನೇ, ನೀನು ನ್ಯಾಯತೀರಿಸುವೆಯಾ? ರಕ್ತಾಪರಾಧ ವುಳ್ಳ ಪಟ್ಟಣಕ್ಕೆ ನ್ಯಾಯತೀರಿಸುವೆಯಾ ಹೌದು ಅದರ ಅಸಹ್ಯವಾದವುಗಳನ್ನೆಲ್ಲಾ ಅದಕ್ಕೆ ತಿಳಿಸುವಿ.

3ನೀನು ಹೇಳಬೇಕಾದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪಟ್ಟಣವು ಅದರ ಮಧ್ಯದಲ್ಲಿ ಅದರ ಕಾಲ ಬರುವ ಹಾಗೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧ ಮಾಡುವ ಹಾಗೆ ತನ್ನಲ್ಲಿ ವಿಗ್ರಹಗಳನ್ನು ಮಾಡಿಕೊಂಡಿದೆ.

4ನೀನು ಚೆಲ್ಲಿದ ನಿನ್ನ ರಕ್ತದಿಂದ ನಿನಗೆ ಅಪರಾಧ ಬಂದಿತು; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧವಾದೆ; ನಿನ್ನ ದಿನಗಳನ್ನು ಸವಿಾಪಿಸಿರುವೆ; ನಿನ್ನ ವರುಷಗಳನ್ನು ಮುಟ್ಟಿರುವೆ. ಆದದರಿಂದ ನಿನ್ನನ್ನು ಅನ್ಯಜನಾಂಗಗಳಿಗೆ ನಾಚಿಕೆ ಯಾಗಿಯೂ ಎಲ್ಲಾ ದೇಶಗಳಿಗೆ ನಿಂದೆಯಾಗಿಯೂ ಮಾಡಿದ್ದೇನೆ.

5ಅಶುದ್ಧ ಹೆಸರುಳ್ಳವಳೇ, ಬಹಳ ತೊಂದರೆಗೊಳಗಾದವಳೇ, ನಿನಗೆ ಹತ್ತಿರದವರೂ ದೂರದವರೂ ನಿಂದಿಸುವರು.

ಯೆಹೆಜ್ಕೇಲನು 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी