ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅರಸನ ಕತ್ತಿಯು ನಿನ್ನ ಮೇಲೆ ಬರುವದು;
9ಇದಲ್ಲದೆ ಜನಾಂಗಗಳೊಳಗೆ ನೀನು ಅರಿಯದ ದೇಶಗಳಲ್ಲಿ, ನಿನ್ನ ನಾಶನವನ್ನು ಪ್ರಸಿದ್ಧಿಪಡಿಸಿ, ಅನೇಕ ಜನಗಳ ಹೃದಯದಲ್ಲಿ ಗಲಿಬಿಲಿ ಎಬ್ಬಿಸುವೆನು.
10ಹೌದು, ನಾನು ಅನೇಕ ಜನರನ್ನು ನಿನ್ನ ವಿಷಯದಲ್ಲಿ ವಿಸ್ಮಯಗೊಳಿಸುವೆನು, ನಾನು ಅವರ ಮುಂದೆ ನನ್ನ ಕತ್ತಿಯನ್ನು ಬೀಸುವಾಗ ಅವರ ಅರಸರು ನಿನ್ನ ವಿಷಯದಲ್ಲಿ ಭಯಭ್ರಾಂತಿಗೊಳ್ಳುವರು. ನೀನು ಬೀಳುವ ಆ ದಿನದಲ್ಲಿ ಅವರು ಕ್ಷಣಕ್ಷಣಕ್ಕೆ ತಮ್ಮ ತಮ್ಮ ಪ್ರಾಣದ ಬಗ್ಗೆ ನಡುಗುವರು.
11ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅರಸನ ಕತ್ತಿಯು ನಿನ್ನ ಮೇಲೆ ಬರುವದು;
12ಪರಾಕ್ರಮ ಶಾಲಿಗಳ ಕತ್ತಿಗಳಿಂದ ಜನಾಂಗಗಳಲ್ಲಿ ಭಯಂಕರ ರಾಗಿರುವ ನಿನ್ನ ಸಮೂಹವನ್ನು ನಾನು ಬೀಳುವಂತೆ ಮಾಡುವೆನು; ಅವರು ಐಗುಪ್ತದ ಮಹತ್ತನ್ನು ಕೆಡಿಸು ವರು; ಅದರ ಜನಸಮೂಹವೆಲ್ಲಾ ಹಾಳಾಗುವದು.
13ನಾನು ಆ ಬಹುಪ್ರವಾಹಗಳ ಬಳಿಯಲ್ಲಿರುವ ಅದರ ಮೃಗಗಳನ್ನೆಲ್ಲಾ ನಾಶಮಾಡುವೆನು; ಆ ನೀರಿನಲ್ಲಿ ಇನ್ನು ಮೇಲೆ ಮನುಷ್ಯನ ಕಾಲಾಗಲಿ, ಪ್ರಾಣಿಗಳ ಗೊರಸಾಗಲಿ ಕಲಕಿಸುವದಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ