ಲೂಕನು 16:20

ಅವನ ಬಾಗಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು; ಅವನು ಮೈ ತುಂಬಾ ಹುಣ್ಣೆದ್ದವನು.

ಸಂದರ್ಭದೊಂದಿಗೆ ಓದಿ · ಲೂಕನು 16

18ಯಾವನು ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುತ್ತಾನೆ; ಯಾವನು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರಮಾಡುತ್ತಾನೆ.

19ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು.

20ಅವನ ಬಾಗಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು; ಅವನು ಮೈ ತುಂಬಾ ಹುಣ್ಣೆದ್ದವನು.

21ಐಶ್ವರ್ಯವಂತನ ಮೇಜಿ ನಿಂದ ಬೀಳುವ (ರೊಟ್ಟಿ) ತುಂಡುಗಳನ್ನು ತಿನ್ನುವದಕ್ಕೆ ಅವನು ಆಶೆಪಡುತ್ತಿದ್ದನು; ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.

22ಇದಾದ ಮೇಲೆ ಆ ಭಿಕ್ಷುಕನು ಸತ್ತನು; ದೂತರು ಅವನನ್ನು ಅಬ್ರಹಾಮನ ಎದೆಗೆ ತೆಗೆದುಕೊಂಡು ಹೋದರು; ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿ ಟ್ಟರು.

ಲೂಕನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी