ಯೆಹೋಶುವ 2:3

ಆಗ ಯೆರಿಕೋವಿನ ಅರಸನು ರಾಹಾಬಳ ಬಳಿಗೆ ಕಳುಹಿಸಿ--ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರಕೊಂಡು ಬಾ. ಅವರು ದೇಶವನ್ನೆಲ್ಲಾ ಶೋಧಿಸಲು ಬಂದಿದ್ದಾರೆ ಅಂದನು.

ಸಂದರ್ಭದೊಂದಿಗೆ ಓದಿ · ಯೆಹೋಶುವ 2

1ನೂನನ ಮಗನಾದ ಯೆಹೋಶುವನು ಪಾಳತಿ ನೋಡುವವರಾದ ಇಬ್ಬರು ಮನುಷ್ಯರನ್ನು ಶಿಟ್ಟೀಮಿನಿಂದ ಗುಪ್ತ ಮಾರ್ಗವಾಗಿ ಕಳುಹಿಸಿ ಅವರಿಗೆ--ನೀವು ಹೋಗಿ ದೇಶವನ್ನು ಮತ್ತು ಯೆರಿಕೋವನ್ನು ನೋಡಿರಿ ಅಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ಸೂಳೆಯ ಮನೆಯಲ್ಲಿ ಇಳಿದುಕೊಂಡರು.

2ಆದರೆ ಯೆರಿಕೋವಿನ ಅರಸ ನಿಗೆ--ಇಗೋ, ಇಸ್ರಾಯೇಲ್‌ ಮನುಷ್ಯರು ದೇಶವನ್ನು ಪರಿಶೋಧನೆ ಮಾಡಲು ರಾತ್ರಿಯಲ್ಲಿ ಇಲ್ಲಿಗೆ ಬಂದಿದ್ದಾ ರೆಂದು ತಿಳಿಸಲ್ಪಟ್ಟಿತು.

3ಆಗ ಯೆರಿಕೋವಿನ ಅರಸನು ರಾಹಾಬಳ ಬಳಿಗೆ ಕಳುಹಿಸಿ--ನಿನ್ನ ಬಳಿಗೆ ಬಂದು ನಿನ್ನ ಮನೆಯಲ್ಲಿ ಪ್ರವೇಶಿಸಿದ ಮನುಷ್ಯರನ್ನು ಹೊರಗೆ ಕರಕೊಂಡು ಬಾ. ಅವರು ದೇಶವನ್ನೆಲ್ಲಾ ಶೋಧಿಸಲು ಬಂದಿದ್ದಾರೆ ಅಂದನು.

4ಸ್ತ್ರೀಯು ಆ ಇಬ್ಬರನ್ನು ಅಡಗಿ ಸಿಟ್ಟು--ನನ್ನ ಬಳಿಗೆ ಮನುಷ್ಯರು ಬಂದಿದ್ದರು; ಆದರೆ ನಾನು ಅವರನ್ನು ಯಾವ ಕಡೆಯವರೆಂದು ತಿಳಿಯದೆ ಇದ್ದೆನು.

5ಬಾಗಲನ್ನು ಮುಚ್ಚುವ ವೇಳೆಯಲ್ಲಿ ಆ ಮನುಷ್ಯರು ಕತ್ತಲೆಯಲ್ಲಿ ಹೊರಟುಹೋದರು. ಅವರು ಎಲ್ಲಿ ಹೋದರೋ ನಾನು ಅರಿಯೆ; ಅವರನ್ನು ಬೇಗ ಹಿಂದಟ್ಟಿರಿ; ನಿಮಗೆ ಸಿಕ್ಕುವರು ಅಂದಳು.

ಯೆಹೋಶುವ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी