೧ ಅರಸುಗಳು 11:28

ಯಾರೊಬ್ಬಾಮನು ಪರಾಕ್ರಮ ಶಾಲಿಯಾಗಿರುವದರಿಂದ ಸೊಲೊಮೋನನು--ಈ ಯೌವನಸ್ಥನು ಕೆಲಸ ಮಾಡತಕ್ಕವನೆಂದು ನೋಡಿ ಯೋಸೇಫನ ಮನೆಯ ಸಮಸ್ತ ಕಾರ್ಯಗಳ ಮೇಲೆ ಅವನನ್ನು ಅಧಿಪತಿಯಾಗಿಟ್ಟನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 11

26ಇದಲ್ಲದೆ ಚರೇದ ಪಟ್ಟಣದ ಎಫ್ರಾತ್ಯನಾದ ನೆಬಾಟನ ಮಗನಾದ ಯಾರೊಬ್ಬಾಮನು ಇದ್ದನು; ಚೆರೂಯಳೆಂಬ ವಿಧವೆಯಾದ ಸ್ತ್ರೀ ಅವನಿಗೆ ತಾಯಿ ಯು; ಅವನು ಸೊಲೊಮೋನನ ಸೇವಕನು; ಇವನು ಅರಸನಿಗೆ ವಿರೋಧವಾಗಿ ತನ್ನ ಕೈಯನ್ನೆತ್ತಿದ್ದನು.

27ಅವನು ಅರಸನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ ಕಾರಣವೇನಂದರೆ, ಸೊಲೊಮೋನನು ಮಿಲ್ಲೋಕೋಟೆಯನ್ನು ಕಟ್ಟಿಸಿ ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಬಿದ್ದುಹೋದವುಗಳನ್ನು ಕಟ್ಟಿ ಸುತ್ತಿರುವಾಗ

28ಯಾರೊಬ್ಬಾಮನು ಪರಾಕ್ರಮ ಶಾಲಿಯಾಗಿರುವದರಿಂದ ಸೊಲೊಮೋನನು--ಈ ಯೌವನಸ್ಥನು ಕೆಲಸ ಮಾಡತಕ್ಕವನೆಂದು ನೋಡಿ ಯೋಸೇಫನ ಮನೆಯ ಸಮಸ್ತ ಕಾರ್ಯಗಳ ಮೇಲೆ ಅವನನ್ನು ಅಧಿಪತಿಯಾಗಿಟ್ಟನು.

29ಆ ಕಾಲದಲ್ಲಿ ಏನಾಯಿತಂದರೆ, ಯಾರೊಬ್ಬಾಮನು ಯೆರೊಸಲೇಮಿ ನೊಳಗಿಂದ ಹೊರಟು ಹೋಗುವಾಗ ಶೀಲೋನ್ಯ ನಾದ ಅಹೀಯನೆಂಬ ಪ್ರವಾದಿಯು ಅವನನ್ನು ಹಾದಿ ಯಲ್ಲಿ ಕಂಡನು.

30ಅವನು ಹೊಸ ವಸ್ತ್ರವನ್ನು ಹೊದ್ದು ಕೊಂಡಿದ್ದನು. ಅವರಿಬ್ಬರೂ ಹೊಲದಲ್ಲಿ ಒಂಟಿಯಾ ಗಿದ್ದರು. ಆಗ ಅಹೀಯನು ತನ್ನ ಮೇಲೆ ಇರುವ ವಸ್ತ್ರವನ್ನು ಹಿಡಿದು ಹನ್ನೆರಡು ತುಂಡುಗಳಾಗಿ ಹರಿದು ಯಾರೊಬ್ಬಾಮನಿಗೆ--ಈ ಹತ್ತು ತುಂಡುಗಳನ್ನು ನೀನು ತೆಗೆದುಕೋ.

೧ ಅರಸುಗಳು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी