ಯೆಹೋಶುವ 10:25

ಆಗ ಯೆಹೋಶುವನು ಅವರಿಗೆ--ಭಯ ಪಡಬೇಡಿರಿ, ನಿರುತ್ಸಾಹಗೊಳ್ಳಬೇಡಿರಿ, ಬಲಗೊಂಡು ಧೈರ್ಯವಾಗಿರ್ರಿ; ನೀವು ಯುದ್ಧಮಾಡುವ ನಿಮ್ಮ ಶತ್ರುಗಳೆಲ್ಲರಿಗೂ ಕರ್ತನು ಹೀಗೆಯೇ ಮಾಡುವನು ಅಂದನು.

ಸಂದರ್ಭದೊಂದಿಗೆ ಓದಿ · ಯೆಹೋಶುವ 10

23ಅವರು ಹಾಗೆಯೇ ಮಾಡಿದರು. ಆ ಐದು ಮಂದಿ ಅರಸರನ್ನು ಅಂದರೆ ಯೆರೂಸಲೇಮಿನ ಅರಸನನ್ನೂ ಹೆಬ್ರೋನಿನ ಅರಸನನ್ನೂ ಯರ್ಮೂತಿನ ಅರಸನನ್ನೂ ಲಾಕೀಷಿನ ಅರಸನನ್ನೂ ಎಗ್ಲೋನಿನ ಅರಸನನ್ನೂ ಆ ಗವಿಯೊಳಗಿಂದ ಅವನ ಬಳಿಗೆ ಹೊರಗೆ ತಂದರು.

24ಅವರನ್ನು ಯೆಹೋಶುವನ ಬಳಿಗೆ ತೆಗೆದುಕೊಂಡು ಬಂದಾಗ ಯೆಹೋಶುವನು ಇಸ್ರಾಯೇಲ್ಯರೆಲ್ಲರನ್ನು ಕರಿಸಿ ತನ್ನ ಸಂಗಡ ಬಂದ ಯುದ್ಧಸ್ಥರಾದ ಅಧಿಕಾರಿಗಳಿಗೆ--ನೀವು ಸವಿಾಪಕ್ಕೆ ಬಂದು ನಿಮ್ಮ ಪಾದಗಳನ್ನು ಈ ಅರಸುಗಳ ಕುತ್ತಿಗೆಗಳ ಮೇಲೆ ಇಡಿರಿ ಅಂದನು. ಆಗ ಅವರು ಸವಿಾಪಕ್ಕೆ ಬಂದು ತಮ್ಮ ಪಾದಗಳನ್ನು ಅವರ ಕುತ್ತಿಗೆಗಳ ಮೇಲೆ ಇಟ್ಟರು.

25ಆಗ ಯೆಹೋಶುವನು ಅವರಿಗೆ--ಭಯ ಪಡಬೇಡಿರಿ, ನಿರುತ್ಸಾಹಗೊಳ್ಳಬೇಡಿರಿ, ಬಲಗೊಂಡು ಧೈರ್ಯವಾಗಿರ್ರಿ; ನೀವು ಯುದ್ಧಮಾಡುವ ನಿಮ್ಮ ಶತ್ರುಗಳೆಲ್ಲರಿಗೂ ಕರ್ತನು ಹೀಗೆಯೇ ಮಾಡುವನು ಅಂದನು.

26ತರುವಾಯ ಯೆಹೋಶುವನು ಅವರನ್ನು ಹೊಡೆದು ಐದು ಮರಗಳಲ್ಲಿ ತೂಗಹಾಕಿ ಸಾಯಿಸಿ ದನು. ಅವರು ಸಾಯಂಕಾಲದ ವರೆಗೂ ಮರಗಳಲ್ಲಿ ತೂಗಾಡುತ್ತಿದ್ದರು.

27ಆದರೆ ಸೂರ್ಯನು ಅಸ್ತಮಿಸು ವಾಗ ಯೆಹೋಶುವನು ಆಜ್ಞಾಪಿಸಲು ಅವರನ್ನು ಮರಗಳಿಂದ ಇಳಿಸಿ ಅವರು ಬಚ್ಚಿಟ್ಟುಕೊಂಡಿದ್ದ ಗವಿ ಯಲ್ಲಿ ಅವರನ್ನು ಹಾಕಿ ಈವರೆಗೂ ಇರುವ ಹಾಗೆ ದೊಡ್ಡ ಕಲ್ಲುಗಳನ್ನು ಅದರ ಬಾಯಿಗೆ ಮುಚ್ಚಿದರು.

ಯೆಹೋಶುವ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी