ಯೆರೆಮಿಯ 3:4

ಈಗಿನಿಂದಲೇ ನನಗೆ --ನನ್ನ ತಂದೆಯೇ, ನನ್ನ ಯೌವನದ ಮಾರ್ಗ ದರ್ಶಕನು ನೀನೇ ಎಂದು ನೀನು ಕೂಗುವದಿಲ್ಲವೋ?

ಸಂದರ್ಭದೊಂದಿಗೆ ಓದಿ · ಯೆರೆಮಿಯ 3

2ನಿನ್ನ ಕಣ್ಣುಗಳನ್ನು ಉನ್ನತ ಸ್ಥಳಗಳ ಮೇಲೆತ್ತುಕೊಂಡು ಎಲ್ಲಿ ನಿನ್ನ ಸಂಗಡ ಮಲಗಲಿಲ್ಲವೋ ನೋಡು. ಅರಣ್ಯದಲ್ಲಿ ಅರಬಿಯನ ಹಾಗೆ ದಾರಿಗಳಲ್ಲಿ ಅವರಿಗೋಸ್ಕರ ಕೂತುಕೊಂಡಿದ್ದೀ; ಹೀಗೆ ನಿನ್ನ ಸೂಳೆತನಗಳಿಂದಲೂ ನಿನ್ನ ಕೆಟ್ಟತನಗಳಿಂದಲೂ ದೇಶವನ್ನು ಅಪವಿತ್ರ ಮಾಡಿದ್ದೀ.

3ಆದದರಿಂದ ಮಳೆ ನಿಂತು ಹೋಯಿತು, ಹಿಂಗಾರೂ ಆಗಲಿಲ್ಲ; ಸೂಳೆಯ ಹಣೆ ನಿನಗಿತ್ತು; ನಾಚುವದನ್ನು ನಿರಾಕರಿಸಿದಿ.

4ಈಗಿನಿಂದಲೇ ನನಗೆ --ನನ್ನ ತಂದೆಯೇ, ನನ್ನ ಯೌವನದ ಮಾರ್ಗ ದರ್ಶಕನು ನೀನೇ ಎಂದು ನೀನು ಕೂಗುವದಿಲ್ಲವೋ?

5ಆತನು ಎಂದೆಂದಿಗೂ ತನ್ನ ಕೋಪವನ್ನು ಕಾದಿರಿಸಿ ಕೊಂಡಿರುವನೋ? ಇಗೋ, ನೀನು ಅಪೇಕ್ಷಿಸಿದ ಹಾಗೆ ಮಾತನಾಡಿದ್ದೀ ಮತ್ತು ಕೆಟ್ಟವುಗಳನ್ನು ನಡಿಸಿದ್ದೀ.

6ಕರ್ತನು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನಂದರೆ--ಹಿಂದಿರುಗಿದ ಇಸ್ರಾ ಯೇಲು ಮಾಡಿದ್ದನ್ನು ನೀನು ನೋಡಿದ್ದಿಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ಹೋಗಿ ಸೂಳೆತನ ಮಾಡಿದ್ದಾಳೆ.

ಯೆರೆಮಿಯ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी