ಯೆಹೋಶುವ 8:11

ಅವನ ಸಂಗಡ ಇದ್ದ ಯುದ್ಧಸ್ಥರೆಲ್ಲಾ ನಡೆದು ಪಟ್ಟಣದ ಸವಿಾಪವಾಗಿ ಬಂದು ಸೇರಿ ಆಯಿಗೆ ಉತ್ತರ ದಿಕ್ಕಿನಲ್ಲಿ ಇಳಿದುಕೊಂಡರು. ಆದರೆ ಆಯಿಗೂ ಅವರಿಗೂ ಮಧ್ಯದಲ್ಲಿ ಒಂದು ತಗ್ಗು ಇತ್ತು.

ಸಂದರ್ಭದೊಂದಿಗೆ ಓದಿ · ಯೆಹೋಶುವ 8

9ಯೆಹೋ ಶುವನು ಅವರನ್ನು ಕಳುಹಿಸಿದಾಗ ಅವರು ಹೋಗಿ ಹೊಂಚಿಕೊಂಡು ಬೇತೇಲಿಗೂ ಆಯಿಗೂ ನಡುವೆ ಆಯಿಗೆ ಪಶ್ಚಿಮದ ಕಡೆ ಇಳುಕೊಂಡರು. ಆದರೆ ಯೆಹೋಶುವನು ಆ ರಾತ್ರಿ ಜನರ ಮಧ್ಯದಲ್ಲಿ ಇಳುಕೊಂಡನು.

10ಉದಯ ಕಾಲದಲ್ಲಿ ಯೆಹೋಶುವನು ಎದ್ದು ಜನರನ್ನು ಲೆಕ್ಕ ಮಾಡಿ ತಾನೂ ಇಸ್ರಾಯೇಲಿನ ಹಿರಿಯರೂ ಜನರ ಮುಂದೆ ನಡೆದು ಆಯಿಗೆ ಏರಿ ಹೋದರು.

11ಅವನ ಸಂಗಡ ಇದ್ದ ಯುದ್ಧಸ್ಥರೆಲ್ಲಾ ನಡೆದು ಪಟ್ಟಣದ ಸವಿಾಪವಾಗಿ ಬಂದು ಸೇರಿ ಆಯಿಗೆ ಉತ್ತರ ದಿಕ್ಕಿನಲ್ಲಿ ಇಳಿದುಕೊಂಡರು. ಆದರೆ ಆಯಿಗೂ ಅವರಿಗೂ ಮಧ್ಯದಲ್ಲಿ ಒಂದು ತಗ್ಗು ಇತ್ತು.

12ಯೆಹೋಶುವನು ಹೆಚ್ಚು ಕಡಿಮೆ ಐದು ಸಾವಿರ ಜನರನ್ನು ಆದುಕೊಂಡು ಆ ಪಟ್ಟಣದ ಪಶ್ಚಿಮ ಕಡೆಯಲ್ಲಿ ಬೇತೇಲಿಗೂ ಆಯಿಗೂ ನಡುವೆ ಹೊಂಚಿ ಕೊಳ್ಳುವದಕ್ಕೆ ಅವರನ್ನು ಇಟ್ಟನು.

13ಪಟ್ಟಣಕ್ಕೆ ಉತ್ತರ ದಲ್ಲಿರುವ ಸಕಲ ಸೈನ್ಯದ ಜನರನ್ನೂ ಪಟ್ಟಣಕ್ಕೆ ಪಶ್ಚಿಮ ದಿಕ್ಕಿನಲ್ಲಿ ಹೊಂಚುಹಾಕುವವರನ್ನೂ ಇಟ್ಟ ತರುವಾಯ ಯೆಹೋಶುವನು ಆ ರಾತ್ರಿಯಲ್ಲಿ ತಗ್ಗಿನ ಮಧ್ಯಕ್ಕೆ ಹೋದನು.

ಯೆಹೋಶುವ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी