೧ ಅರಸುಗಳು 11:11

ಆದಕಾರಣ ಕರ್ತನು ಸೊಲೊಮೋನನಿಗೆ--ನೀನು ಹೀಗೆ ನಡೆದು ನಾನು ನಿನಗೆ ಆಜ್ಞಾಪಿಸಿದ ಒಡಂಬಡಿಕೆಯನ್ನೂ ನನ್ನ ಕಟ್ಟಳೆಗಳನ್ನೂ ಕೈಕೊಳ್ಳದೆ ಹೋದದರಿಂದ ನಿಶ್ಚಯ ವಾಗಿ ನಾನು ರಾಜ್ಯವನ್ನು ನಿನ್ನಿಂದ ಕಸಕೊಂಡು ಅದನ್ನು ನಿನ್ನ ಸೇವಕನಿಗೆ ಕೊಡುವೆನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 11

9ಆದಕಾರಣ ಸೊಲೊಮೋನನಿಗೆ ಎರಡು ಸಾರಿ ಪ್ರತ್ಯಕ್ಷನಾದ ಇಸ್ರಾಯೇಲಿನ ದೇವರಾದ ಕರ್ತನ ಕಡೆಯಿಂದ ಅವನ ಹೃದಯವು ತಿರುಗಿಹೋದದರಿಂದ ಕರ್ತನು ಅವನ ಮೇಲೆ ಕೋಪಿಸಿಕೊಂಡಿದ್ದನು.

10ಅನ್ಯ ದೇವರುಗಳ ಹಿಂದೆ ಹೋಗಬಾರದೆಂದು ಆತನು ಇದನ್ನು ಕುರಿತು ಅವನಿಗೆ ಆಜ್ಞಾಪಿಸಿದ್ದನು. ಆದರೆ ಕರ್ತನು ಆಜ್ಞಾಪಿಸಿ ದ್ದನ್ನು ಅವನು ಕೈಕೊಳ್ಳದೆ ಹೋದನು.

11ಆದಕಾರಣ ಕರ್ತನು ಸೊಲೊಮೋನನಿಗೆ--ನೀನು ಹೀಗೆ ನಡೆದು ನಾನು ನಿನಗೆ ಆಜ್ಞಾಪಿಸಿದ ಒಡಂಬಡಿಕೆಯನ್ನೂ ನನ್ನ ಕಟ್ಟಳೆಗಳನ್ನೂ ಕೈಕೊಳ್ಳದೆ ಹೋದದರಿಂದ ನಿಶ್ಚಯ ವಾಗಿ ನಾನು ರಾಜ್ಯವನ್ನು ನಿನ್ನಿಂದ ಕಸಕೊಂಡು ಅದನ್ನು ನಿನ್ನ ಸೇವಕನಿಗೆ ಕೊಡುವೆನು.

12ಆದರೆ ನಿನ್ನ ತಂದೆಯಾದ ದಾವೀದನಿಗೋಸ್ಕರ ನಿನ್ನ ಕಾಲ ದಲ್ಲಿ ನಾನು ಇದನ್ನು ಮಾಡದೆ ನಿನ್ನ ಮಗನ ಕೈಯೊಳಗಿಂದ ಅದನ್ನು ಕಸಕೊಳ್ಳುವೆನು.

13ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ನಾನು ಆದುಕೊಂಡ ಯೆರೂಸಲೇಮಿಗೋಸ್ಕರವಾಗಿಯೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು ಅಂದನು.

೧ ಅರಸುಗಳು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी