ರೂತಳು 2:9

ನಿನ್ನ ಕಣ್ಣುಗಳು ಅವರು ಕೊಯ್ಯುವ ಹೊಲದ ಮೇಲೆ ಇರಲಿ; ಅವರ ಹಿಂದೆಯೇ ಹೋಗು, ಯಾವನಾದರೂ ನಿನ್ನನ್ನು ಮುಟ್ಟದ ಹಾಗೆ ಅವರಿಗೆ ಆಜ್ಞಾಪಿಸಿದೆನಲ್ಲಾ? ನಿನಗೆ ದಾಹವಾದರೆ ನೀನು ಪಾತ್ರೆಗಳ ಬಳಿಗೆ ಹೋಗಿ ಪ್ರಾಯಸ್ಥರು ಸೇದಿಟ್ಟ ನೀರನ್ನು ಕುಡಿ ಅಂದನು.

ಸಂದರ್ಭದೊಂದಿಗೆ ಓದಿ · ರೂತಳು 2

7ಆದರೆ ಇವಳು, ಕೊಯ್ಯುವವರ ಹಿಂದೆ ಕೊಯ್ದ ಸಿವುಡುಗಳಲ್ಲಿ ನಾನು ಹಕ್ಕಲಾರಿಸಿಕೊಳ್ಳಲೂ ಕೂಡಿಸಿಕೊಳ್ಳಲೂ ಅಪ್ಪಣೆ ಯಾಗಲಿ ಅಂದಳು. ಮನೆಯಲ್ಲಿ ಕ್ಷಣಮಾತ್ರವಿದ್ದು ಬೆಳಗಿನಿಂದ ಈ ವರೆಗೂ ಇಲ್ಲಿಯೇ ಇದ್ದಾಳೆ ಅಂದನು.

8ಆಗ ಬೋವಜನು ರೂತಳಿಗೆ ನನ್ನ ಮಗಳೇ, ನನ್ನ ಮಾತು ಕೇಳುತ್ತೀಯಾ? ನೀನು ಹಕ್ಕಲಾದುಕೊಳ್ಳಲು ಅನ್ಯರ ಹೊಲಕ್ಕೆ ಹೋಗದೆ, ಈ ಸ್ಥಳವನ್ನು ಬಿಟ್ಟು ಹೊರಡದೆ, ಇಲ್ಲಿಯೇ ನನ್ನ ದಾಸಿಗಳ ಸಂಗಡ ಕೂಡಿಕೊಂಡಿರು.

9ನಿನ್ನ ಕಣ್ಣುಗಳು ಅವರು ಕೊಯ್ಯುವ ಹೊಲದ ಮೇಲೆ ಇರಲಿ; ಅವರ ಹಿಂದೆಯೇ ಹೋಗು, ಯಾವನಾದರೂ ನಿನ್ನನ್ನು ಮುಟ್ಟದ ಹಾಗೆ ಅವರಿಗೆ ಆಜ್ಞಾಪಿಸಿದೆನಲ್ಲಾ? ನಿನಗೆ ದಾಹವಾದರೆ ನೀನು ಪಾತ್ರೆಗಳ ಬಳಿಗೆ ಹೋಗಿ ಪ್ರಾಯಸ್ಥರು ಸೇದಿಟ್ಟ ನೀರನ್ನು ಕುಡಿ ಅಂದನು.

10ಆಗ ಅವಳು ಸಾಷ್ಟಾಂಗ ಬಿದ್ದು ವಂದಿಸಿ ಅವನಿಗೆ ನಾನು ಅನ್ಯಳಾಗಿರುವಾಗ ನೀನು ನನ್ನನ್ನು ತಿಳುಕೊಂಡು ನನ್ನ ಮೇಲೆ ನಿನ್ನ ಕೃಪೆ ಯನ್ನು ತೋರಿಸಿದ್ದು ಹೇಗೆ ಅಂದಳು.

11ಆಗ ಬೋವಜನು ಅವಳಿಗೆ ಪ್ರತ್ಯುತ್ತರವಾಗಿ ನಿನ್ನ ಗಂಡನು ಸತ್ತ ತರುವಾಯ ನೀನು ನಿನ್ನ ಅತ್ತೆಗೋಸ್ಕರ ಮಾಡಿ ದ್ದೆಲ್ಲವೂ ನಿನ್ನ ತಂದೆತಾಯಿಗಳನ್ನೂ ಹುಟ್ಟಿದ ದೇಶವನ್ನೂ ಎಂದಿಗೂ ಅರಿಯದ ಜನರ ಬಳಿಗೆ ಬಂದದ್ದೂ ನನಗೆ ಚೆನ್ನಾಗಿ ತಿಳಿಸಲ್ಪಟ್ಟಿದೆ.

ರೂತಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी