ಯೆಹೋಶುವ 6:22

ಆದರೆ ಯೆಹೋಶುವನು ದೇಶವನ್ನು ಪಾಳತಿ ನೋಡುವದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ-- ನೀವು ಸೂಳೆಯಾದ ಹೆಂಗಸಿನ ಮನೆಗೆ ಹೋಗಿ ಅವಳನ್ನೂ ಅವಳಿಗೆ ಉಂಟಾದ ಸಮಸ್ತವನ್ನೂ ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಯೆಹೋಶುವ 6

20ಹೀಗೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತ್ತೂರಿಯ ಶಬ್ದವನ್ನು ಜನರು ಕೇಳಿದಾಗ ಮಹಾ ಆರ್ಭಟವಾಗಿ ಆರ್ಭಟಿಸುತ್ತಲೇ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು; ಹೀಗೆ ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಏರಿಹೋದನು. ಆಗ ಪಟ್ಟಣವು ಅವರಿಗೆ ಸ್ವಾಧೀನ ವಾಯಿತು.

21ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀ ಪುರುಷ ರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆ ಗಳನ್ನೂ ಕತ್ತಿಯ ಬಾಯಿಂದ ಸಂಪೂರ್ಣವಾಗಿ ನಾಶ ಮಾಡಿದರು.

22ಆದರೆ ಯೆಹೋಶುವನು ದೇಶವನ್ನು ಪಾಳತಿ ನೋಡುವದಕ್ಕೆ ಹೋಗಿದ್ದ ಇಬ್ಬರು ಮನುಷ್ಯರಿಗೆ-- ನೀವು ಸೂಳೆಯಾದ ಹೆಂಗಸಿನ ಮನೆಗೆ ಹೋಗಿ ಅವಳನ್ನೂ ಅವಳಿಗೆ ಉಂಟಾದ ಸಮಸ್ತವನ್ನೂ ಅವಳಿಗೆ ಆಣೆ ಇಟ್ಟ ಹಾಗೆ ಅಲ್ಲಿಂದ ಹೊರಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.

23ಪಾಳತಿಗಾರರಾದ ಯೌವನಸ್ಥರು ಒಳಗೆ ಹೋಗಿ ರಾಹಾಬಳನ್ನೂ ಅವಳ ತಂದೆ ತಾಯಿಯನ್ನೂ ಸಹೋದರರನ್ನೂ ಅವಳಿಗಿದ್ದ ಸಮಸ್ತವನ್ನೂ ಅವಳ ಸಂಬಂಧಿಕರಾದವರೆಲ್ಲರನ್ನೂ ಹೊರಗೆ ಕರತಂದು ಇಸ್ರಾಯೇಲ್‌ ಪಾಳೆಯದ ಹೊರಗೆ ಅವರನ್ನು ಇರಿಸಿದರು.

24ಆದರೆ ಪಟ್ಟಣ ವನ್ನೂ ಅದರಲ್ಲಿರುವ ಸಮಸ್ತವನ್ನೂ ಬೆಂಕಿಯಿಂದ ಸುಟ್ಟುಬಿಟ್ಟರು. ಬೆಳ್ಳಿ ಬಂಗಾರವನ್ನೂ ಹಿತ್ತಾಳೆ ಕಬ್ಬಿಣದ ಪಾತ್ರೆಗಳನ್ನೂ ಮಾತ್ರ ಕರ್ತನ ಮನೆಯ ಭಂಡಾರದಲ್ಲಿ ಇಟ್ಟರು.

ಯೆಹೋಶುವ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी