ಆದಿಕಾಂಡ 39:13

ಅವನು ತನ್ನ ವಸ್ತ್ರ ವನ್ನು ತನ್ನ ಕೈಯಲ್ಲಿ ಬಿಟ್ಟುಬಿಟ್ಟದ್ದನ್ನೂ ಹೊರಗೆ ಓಡಿಹೋದದನ್ನೂ ಅವಳು ಕಂಡು

ಸಂದರ್ಭದೊಂದಿಗೆ ಓದಿ · ಆದಿಕಾಂಡ 39

11ಹೀಗಿರುವಲ್ಲಿ ಅವನು ತನ್ನ ಕೆಲಸ ಮಾಡುವದಕ್ಕೆ ಮನೆಯನ್ನು ಪ್ರವೇಶಿಸಿದಾಗ ಮನೆಯವರಲ್ಲಿ ಒಬ್ಬರೂ ಮನೆ ಯಲ್ಲಿರಲಿಲ್ಲ.

12ಆಗ ಆಕೆಯು ಅವನ ವಸ್ತ್ರವನ್ನು ಹಿಡುಕೊಂಡು--ನನ್ನ ಸಂಗಡ ಮಲಗು ಅಂದಳು. ಆದರೆ ಅವನು ತನ್ನ ವಸ್ತ್ರವನ್ನು ಅವಳ ಕೈಯಲ್ಲಿ ಬಿಟ್ಟು ಹೊರಗೆ ಓಡಿಹೋದನು.

13ಅವನು ತನ್ನ ವಸ್ತ್ರ ವನ್ನು ತನ್ನ ಕೈಯಲ್ಲಿ ಬಿಟ್ಟುಬಿಟ್ಟದ್ದನ್ನೂ ಹೊರಗೆ ಓಡಿಹೋದದನ್ನೂ ಅವಳು ಕಂಡು

14ತನ್ನ ಮನೆಯ ಮನುಷ್ಯರನ್ನು ಕರೆದು ಅವರಿಗೆ--ನೋಡಿರಿ, ಅವನು (ಗಂಡಸು) ನಮ್ಮನ್ನು ಹಾಸ್ಯಮಾಡುವದಕ್ಕೆ ಇಬ್ರಿಯನನ್ನು ನಮ್ಮಲ್ಲಿಗೆ ತಂದಿದ್ದಾನೆ. ಅವನು ನನ್ನ ಸಂಗಡ ಮಲಗುವದಕ್ಕೆ ನನ್ನ ಬಳಿಗೆ ಬಂದನು. ಆಗ ನಾನು ದೊಡ್ಡ ಶಬ್ದದಿಂದ ಕೂಗಿದೆನು.

15ನಾನು ನನ್ನ ಸ್ವರವನ್ನೆತ್ತಿ ಕೂಗಿದ್ದನ್ನು ಅವನು ಕೇಳಿ ತನ್ನ ವಸ್ತ್ರವನ್ನು ನನ್ನ ಬಳಿಯಲ್ಲೇ ಬಿಟ್ಟು ಹೊರಗೆ ಓಡಿಹೋದನು ಅಂದಳು.

ಆದಿಕಾಂಡ 39 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी