ಎಸ್ತೇರಳು 3:1

ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನು ಅಗಾಗ್ಯನಾದ ಹಮ್ಮೆದಾತನ ಮಗನಾದ ಹಾಮಾನನನ್ನು ದೊಡ್ಡವ ನಾಗಿ ಮಾಡಿ ಅವನನ್ನು ಎತ್ತಿ ತನ್ನ ಬಳಿಯಲ್ಲಿರುವ ಸಮಸ್ತ ಪ್ರಧಾನರಿಗಿಂತ ಅವನ ಆಸನವನ್ನು ಉನ್ನತ ಮಾಡಿದನು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 3

1ಈ ಕಾರ್ಯಗಳಾದ ತರುವಾಯ ಅರಸನಾದ ಅಹಷ್ವೇರೋಷನು ಅಗಾಗ್ಯನಾದ ಹಮ್ಮೆದಾತನ ಮಗನಾದ ಹಾಮಾನನನ್ನು ದೊಡ್ಡವ ನಾಗಿ ಮಾಡಿ ಅವನನ್ನು ಎತ್ತಿ ತನ್ನ ಬಳಿಯಲ್ಲಿರುವ ಸಮಸ್ತ ಪ್ರಧಾನರಿಗಿಂತ ಅವನ ಆಸನವನ್ನು ಉನ್ನತ ಮಾಡಿದನು.

2ಆದಕಾರಣ ಅರಮನೆಯ ಬಾಗಲ ಲ್ಲಿರುವ ಅರಸನ ಸಮಸ್ತ ಸೇವಕರು ಬೊಗ್ಗಿ ಹಾಮಾನ ನಿಗೆ ಅಡ್ಡಬಿದ್ದರು. ಅರಸನು ಅವನನ್ನು ಕುರಿತು ಹಾಗೆಯೇ ಆಜ್ಞಾಪಿಸಿದ್ದನು, ಆದರೆ ಮೊರ್ದೆಕೈ ಬೊಗ್ಗದೆ ಅಡ್ಡಬೀಳದೆ ಇದ್ದನು.

3ಆಗ ಅರಮನೆಯ ಬಾಗಲಲ್ಲಿರುವ ಅರಸನ ಸೇವಕರು ಮೊರ್ದೆಕೈಗೆ ನೀನು ಅರಸನ ಆಜ್ಞೆಯನ್ನು ವಿಾರುವದೇನು ಅಂದರು.

ಎಸ್ತೇರಳು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी