ಮಿಕ 2:11

ಒಬ್ಬನು ಆತ್ಮದಲ್ಲಿಯೂ ವಂಚನೆಯಲ್ಲಿಯೂ ನಡೆದು ಸುಳ್ಳು ಹೇಳಿ--ನಿನಗೆ ದ್ರಾಕ್ಷಾರಸವನ್ನೂ ಮತ್ತಾಗುವದನ್ನೂ ಕುರಿತು ಪ್ರವಾದಿಸುವೆನೆಂದು ಹೇಳಿ ದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.

ಸಂದರ್ಭದೊಂದಿಗೆ ಓದಿ · ಮಿಕ 2

9ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ.

10ನೀವು ಎದ್ದು ಹೋಗಿರಿ; ಇದು ನಿಮ್ಮ ವಿಶ್ರಾಂತಿ ಅಲ್ಲ; ಇದು ಅಶುದ್ಧವಾಗಿದ್ದ ಕಾರಣ, ನಿಮ್ಮನ್ನು ಕಠಿಣವಾದ ನಾಶನದಿಂದ ನಾಶಮಾಡು ವದು.

11ಒಬ್ಬನು ಆತ್ಮದಲ್ಲಿಯೂ ವಂಚನೆಯಲ್ಲಿಯೂ ನಡೆದು ಸುಳ್ಳು ಹೇಳಿ--ನಿನಗೆ ದ್ರಾಕ್ಷಾರಸವನ್ನೂ ಮತ್ತಾಗುವದನ್ನೂ ಕುರಿತು ಪ್ರವಾದಿಸುವೆನೆಂದು ಹೇಳಿ ದರೆ, ಇವನೇ ಈ ಜನರಿಗೆ ಪ್ರವಾದಿಯಾಗಿರುವನು.

12ಯಾಕೋಬೇ ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು; ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು, ಬೊಚ್ರದ ಕುರಿಗ ಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆ ಯಂತೆಯೂ ಅವರನ್ನು ಒಟ್ಟಾಗಿ ಕೂಡಿಡುವೆನು; ಬಹುಮಂದಿಯಾಗಿರುವ ಕಾರಣ ಅವರು ಮಹಾ ಶಬ್ದ ಮಾಡುವರು.

13ಒಡೆಯುವವನು ಅವರ ಮುಂದೆ ಬಂದಿದ್ದಾನೆ; ಅವರು ಬಾಗಲನ್ನು ಒಡೆದು ಅದರಿಂದ ಹಾದುಹೋಗಿದ್ದಾರೆ; ಅವರ ಅರಸನು ಅವರ ಮುಂದೆ ಹಾದುಹೋಗುತ್ತಾನೆ; ಕರ್ತನು ಅವರಿಗೆ ಮುಂದಾಗಿರುವನು.

ಮಿಕ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी