ನಿನ್ನ ಮಕ್ಕಳೆಲ್ಲಾ ಕರ್ತನಿಂದ ಬೋಧಿಸಲ್ಪಡು ವರು; ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರು ವದು.
11ಸಂಕಟಕ್ಕೊಳಗಾದವಳೇ, ಬಿರುಗಾಳಿಯಿಂದ ಬಡಿ ಯಲ್ಪಟ್ಟು ಆದರಣೆ ಹೊಂದದವಳೇ, ಇಗೋ, ನಾನು ನಿನ್ನ ಕಲ್ಲುಗಳನ್ನು ಸುಂದರವಾದ ಬಣ್ಣಗಳೊಂದಿಗೆ ಇಟ್ಟು ನಿನ್ನ ಅಸ್ತಿವಾರವನ್ನು ನೀಲಮಣಿಗಳೊಂದಿಗೆ ಹಾಕುವೆನು.
12ನಿನ್ನ ಕಿಟಕಿಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ ನಿನ್ನ ಮೇರೆ ಗಳನ್ನು ಮನೋಹರವಾದ ರತ್ನಗಳಿಂದ ನಾನು ಮಾಡು ವೆನು.
13ನಿನ್ನ ಮಕ್ಕಳೆಲ್ಲಾ ಕರ್ತನಿಂದ ಬೋಧಿಸಲ್ಪಡು ವರು; ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರು ವದು.
14ನೀನು ನೀತಿಯಲ್ಲಿ ನೆಲೆಗೊಂಡಿರುವಿ; ಹಿಂಸೆ ಯಿಂದ ದೂರವಾಗಿರುವಿ; ನೀನು ಭೀತಿಯಿಂದ ಭಯ ಪಡುವದಿಲ್ಲ; ಅದು ನಿನ್ನ ಸವಿಾಪಕ್ಕೆ ಬಾರದು.
15ಇಗೋ, ನಿಶ್ಚಯವಾಗಿ ಅವರು ಒಟ್ಟಾಗಿ ಕೂಡಿ ಕೊಳ್ಳುವರು, ಆದರೆ ನನ್ನಿಂದಲ್ಲ; ನಿನಗೆ ವಿರೋಧವಾಗಿ ಯಾರ್ಯಾರು ಒಟ್ಟಾಗಿ ಕೂಡಿಕೊಳ್ಳುವರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ