೧ ಪೇತ್ರನು 3:5

ಪೂರ್ವಕಾಲದಲ್ಲಿ ದೇವರ ಮೇಲೆ ನಂಬಿಕೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಆಲಂಕರಿಸಿಕೊಂಡರು; ಅವರು ತಮ್ಮ ತಮ್ಮ ಗಂಡಂ ದಿರಿಗೆ ಅಧೀನರಾಗಿದ್ದರು.

ಸಂದರ್ಭದೊಂದಿಗೆ ಓದಿ · ೧ ಪೇತ್ರನು 3

3ಜಡೆ ಹೆಣೆದುಕೊ ಳ್ಳುವದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದೂ ಇಲ್ಲವೆ ಉಡಿಗೆಗಳನ್ನು ಧರಿಸಿಕೊಳ್ಳುವದೂ ಈ ಹೊರ ಗಣ ಅಲಂಕಾರವು ಬೇಡ.

4ಆದರೆ ಸಾತ್ವಿಕವಾದ ಶಾಂತ ಮನಸ್ಸು ಎಂಬ ಹೃದಯದ ಮರೆಯಾದ ಮನುಷ್ಯನ ಅಲಂಕಾರವೇ ನಿಮಗಿರಲಿ. ಇದು ಅಕ್ಷಯ ವಾಗಿದ್ದು ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದಾಗಿದೆ.

5ಪೂರ್ವಕಾಲದಲ್ಲಿ ದೇವರ ಮೇಲೆ ನಂಬಿಕೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಆಲಂಕರಿಸಿಕೊಂಡರು; ಅವರು ತಮ್ಮ ತಮ್ಮ ಗಂಡಂ ದಿರಿಗೆ ಅಧೀನರಾಗಿದ್ದರು.

6ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಸಾರಳ ಕುಮಾರ್ತೆಗಳಾಗಿದ್ದೀರಲ್ಲಾ; ನೀವು ಒಳ್ಳೇದನ್ನು ಮಾಡುವದಾದರೆ ಯಾವ ಭೀತಿಗೂ ಗಾಬರಿ ಪಡುವದಿಲ್ಲ.

7ಅದೇ ರೀತಿಯಾಗಿ ಪುರಷರೇ, ಸ್ತ್ರೀಯು ಬಲಹೀನ ಳೆಂಬದನ್ನು ತಿಳಿದು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಇರ್ರಿ. ಅವರು ಜೀವದ ಕೃಪೆಯಲ್ಲಿ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.

೧ ಪೇತ್ರನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी