ಅರಣ್ಯಕಾಂಡ 18:17

ಆದರೆ ಪಶು ಕುರಿ ಮೇಕೆ ಇವುಗಳ ಚೊಚ್ಚಲನ್ನಾದರೂ ನೀನು ವಿಮೋಚಿಸಿಕೊಳ್ಳಬಾರದು; ಅವು ಪರಿಶುದ್ಧವಾಗಿವೆ; ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸ ಬೇಕು; ಅವುಗಳ ಕೊಬ್ಬನ್ನು ಕರ್ತನಿಗೆ ದಹನ ವಾಗಿಯೂ ಸುವಾಸನೆಗಾಗಿಯೂ ಸುಡಬೇಕು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 18

15ಮನುಷ್ಯರಲ್ಲಾಗಲಿ ಪಶುಗಳ ಲ್ಲಾಗಲಿ ಕರ್ತನಿಗೆ ತರುವ ಎಲ್ಲಾ ಶರೀರಗಳಲ್ಲಿ ಚೊಚ್ಚಲಾದದ್ದೆಲ್ಲಾ ನಿನ್ನದಾಗಿರಬೇಕು; ಆದರೆ ಮನುಷ್ಯರ ಚೊಚ್ಚಲಾದದ್ದನ್ನೂ ಪವಿತ್ರವಾದ ಪಶುಗಳ ಚೊಚ್ಚಲಾದದ್ದನ್ನೂ ನೀನು ವಿಮೋಚಿಸಬೇಕು.

16ಬಿಡಿಸತಕ್ಕವುಗಳನ್ನು ಒಂದು ತಿಂಗಳಿನ ಪ್ರಾಯ ದಿಂದ ಇಪ್ಪತ್ತು ಗೇರಗಳು ಅಂದರೆ ಪರಿಶುದ್ಧ ಶೇಕೆಲಿನ ಮೇರೆಗೆ ನಿನ್ನ ಎಣಿಕೆಯಲ್ಲಿ ಐದು ಶೇಕೆಲುಗಳ ಬೆಳ್ಳಿ ಯಿಂದ ವಿಮೋಚಿಸಿಕೊಳ್ಳಬೇಕು.

17ಆದರೆ ಪಶು ಕುರಿ ಮೇಕೆ ಇವುಗಳ ಚೊಚ್ಚಲನ್ನಾದರೂ ನೀನು ವಿಮೋಚಿಸಿಕೊಳ್ಳಬಾರದು; ಅವು ಪರಿಶುದ್ಧವಾಗಿವೆ; ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸ ಬೇಕು; ಅವುಗಳ ಕೊಬ್ಬನ್ನು ಕರ್ತನಿಗೆ ದಹನ ವಾಗಿಯೂ ಸುವಾಸನೆಗಾಗಿಯೂ ಸುಡಬೇಕು.

18ಆಡಿಸುವ ಬಲಿಯ ಎದೆಯೂ ಬಲ ಭುಜವೂ ನಿನ್ನದಾಗಿರುವ ಪ್ರಕಾರ ಅವುಗಳ ಮಾಂಸವೂ ನಿನ್ನ ದಾಗಿರಬೇಕು.

19ಇಸ್ರಾಯೇಲ್‌ ಮಕ್ಕಳು ಕರ್ತನಿಗೆ ಎತ್ತುವ ಪರಿಶುದ್ಧವಾದ ಅರ್ಪಣೆಗಳನ್ನೆಲ್ಲಾ ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ನಿತ್ಯ ಕಟ್ಟಳೆ ಯಾಗಿ ಕೊಟ್ಟಿದ್ದೇನೆ; ಇದು ಕರ್ತನ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ನಿತ್ಯವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು.

ಅರಣ್ಯಕಾಂಡ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी