೧ ಅರಸುಗಳು 1:25

ಈ ಹೊತ್ತು ಅವನು ಇಳಿದು ಹೋಗಿ ಎತ್ತು ಗಳನ್ನೂ ಕೊಬ್ಬಿದ ಪಶುಗಳನ್ನೂ ಕುರಿಗಳನ್ನೂ ಅನೇಕ ವಾಗಿ ಕೊಲ್ಲಿಸಿ ಅರಸನ ಮಕ್ಕಳೆಲ್ಲರನ್ನೂ ಸೈನ್ಯಾಧಿಪತಿ ಗಳನ್ನೂ ಯಾಜಕನಾದ ಎಬ್ಯಾತಾರನನ್ನೂ ಕರೆದಿ ದ್ದಾನೆ. ಇಗೋ, ಅವರು ಅವನ ಮುಂದೆ ತಿಂದು, ಕುಡಿದು--ಅರಸನಾದ ಅದೋನೀಯನನ್ನು ದೇವರು ರಕ್ಷಿಸಲಿ ಎಂದು ಅನ್ನುತ್ತಾರೆ.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 1

23ಆಗ ಅರಸನಿಗೆ--ಇಗೋ, ಪ್ರವಾದಿ ಯಾದ ನಾತಾನನು ಅಂದರು. ಅವನು ಒಳಗೆ ಅರಸನ ಮುಂದೆ ಬಂದಾಗ ಮೋರೆ ಕೆಳಗಾಗಿ ನೆಲಕ್ಕೆ ಅಡ್ಡ ಬಿದ್ದನು. ಆಗ ನಾತಾನನು--ಓ ಅರಸನಾದ ನನ್ನ ಒಡೆಯನೇ,

24ಅದೋನೀಯನು ನನ್ನ ತರುವಾಯ ಆಳುವನೆಂದೂ ನಿನ್ನ ಸಿಂಹಾಸನದ ಮೇಲೆ ಕುಳಿತು ಕೊಳ್ಳುವನೆಂದೂ ನೀನು ಹೇಳಿದ್ದು ಹೌದೋ?

25ಈ ಹೊತ್ತು ಅವನು ಇಳಿದು ಹೋಗಿ ಎತ್ತು ಗಳನ್ನೂ ಕೊಬ್ಬಿದ ಪಶುಗಳನ್ನೂ ಕುರಿಗಳನ್ನೂ ಅನೇಕ ವಾಗಿ ಕೊಲ್ಲಿಸಿ ಅರಸನ ಮಕ್ಕಳೆಲ್ಲರನ್ನೂ ಸೈನ್ಯಾಧಿಪತಿ ಗಳನ್ನೂ ಯಾಜಕನಾದ ಎಬ್ಯಾತಾರನನ್ನೂ ಕರೆದಿ ದ್ದಾನೆ. ಇಗೋ, ಅವರು ಅವನ ಮುಂದೆ ತಿಂದು, ಕುಡಿದು--ಅರಸನಾದ ಅದೋನೀಯನನ್ನು ದೇವರು ರಕ್ಷಿಸಲಿ ಎಂದು ಅನ್ನುತ್ತಾರೆ.

26ಆದರೆ ನನ್ನನ್ನೂ ಅಂದರೆ ನಿನ್ನ ಸೇವಕನಾದ ನನ್ನನ್ನೂ ಯೆಹೋಯಾ ದಾವನ ಮಗನಾದ ಬೆನಾಯನನ್ನೂ ನಿನ್ನ ಸೇವಕನಾದ ಸೊಲೊಮೋನನನ್ನೂ ಅವನು ಕರೆಯಲೇ ಇಲ್ಲ.

27ಅರಸನಾದ ನನ್ನ ಒಡೆಯನಿಂದ ಈ ಕಾರ್ಯ ವಾಯಿತೋ? ಅರಸನಾದ ನನ್ನ ಒಡೆಯನು ತನ್ನ ತರುವಾಯ ತನ್ನ ಸಿಂಹಾಸನದ ಮೇಲೆ ಕುಳಿತು ಕೊಳ್ಳುವವನು ಯಾರೆಂದು ನಿನ್ನ ಸೇವಕನಾದ ನನಗೆ ನೀನು ತಿಳಿಸದೆ ಹೋದಿಯೋ ಅಂದನು.

೧ ಅರಸುಗಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी