ಯೆರೆಮಿಯ 8:13

ನಾನು ಅವರನ್ನು ನಿಜವಾಗಿಯೂ ಸಂಹರಿಸುವೆನೆಂದು ಕರ್ತನು ಅನ್ನುತ್ತಾನೆ; ದ್ರಾಕ್ಷೇ ಗಿಡದಲ್ಲಿ ಹಣ್ಣುಗಳು ಇರುವದಿಲ್ಲ; ಇಲ್ಲವೆ ಅಂಜೂರ ಮರದಲ್ಲಿ ಹಣ್ಣುಗಳು ಇರುವದಿಲ್ಲ; ಎಲೆಯು ಬಾಡು ವದು; ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟುಹೋಗುವವು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 8

11ಅವರು ನನ್ನ ಜನರ ಮಗಳ ಗಾಯವನ್ನು ಸ್ವಲ್ಪವಾಗಿ ಸ್ವಸ್ಥಮಾಡಿ ಸಮಾಧಾನವಿಲ್ಲದಿರುವಾಗ--ಸಮಾಧಾನ, ಸಮಾ ಧಾನ ಎಂದನ್ನುತ್ತಾರೆ. ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ?

12ಇಲ್ಲ, ಸ್ವಲ್ಪ ವಾದರೂ ನಾಚಿಕೆಪಡಲಿಲ್ಲ; ಇಲ್ಲವೆ ಅವರು ಲಜ್ಜೆ ಯನ್ನು ಅರಿಯರು. ಆದದರಿಂದ ಬೀಳುವವರೊಳಗೆ ಅವರು ಬೀಳುವರು; ಅವರು ವಿಚಾರಿಸಲ್ಪಡುವ ಕಾಲದಲ್ಲಿ ಕೆಳಗೆ ಹಾಕಲ್ಪಡು ವರು ಎಂದು ಕರ್ತನು ಹೇಳುತ್ತಾನೆ.

13ನಾನು ಅವರನ್ನು ನಿಜವಾಗಿಯೂ ಸಂಹರಿಸುವೆನೆಂದು ಕರ್ತನು ಅನ್ನುತ್ತಾನೆ; ದ್ರಾಕ್ಷೇ ಗಿಡದಲ್ಲಿ ಹಣ್ಣುಗಳು ಇರುವದಿಲ್ಲ; ಇಲ್ಲವೆ ಅಂಜೂರ ಮರದಲ್ಲಿ ಹಣ್ಣುಗಳು ಇರುವದಿಲ್ಲ; ಎಲೆಯು ಬಾಡು ವದು; ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟುಹೋಗುವವು.

14ನಾವು ಯಾಕೆ ಸುಮ್ಮನೆ ಕೂತುಕೊಳ್ಳುವದು? ನೀವು ಕೂಡಿಕೊಳ್ಳಿರಿ, ನಾವು ಕೋಟೆಯುಳ್ಳ ಪಟ್ಟಣಗಳಲ್ಲಿ ಪ್ರವೇಶಿಸೋಣ, ಅಲ್ಲಿ ಮೌನವಾಗಿರೋಣ. ನಾವು ನಮ್ಮ ಕರ್ತನಿಗೆ ವಿರೋಧ ವಾಗಿ ಪಾಪಮಾಡಿದ ಕಾರಣ ನಮ್ಮ ದೇವರಾದ ಕರ್ತನು ನಮ್ಮನ್ನು ಮೌನವಾಗಿ ಮಾಡಿ ನಮಗೆ ವಿಷದ ನೀರನ್ನು ಕುಡಿಯಕೊಟ್ಟಿದ್ದಾನೆ.

15ಸಮಾ ಧಾನಕ್ಕೆ ಕಾದುಕೊಂಡೆವು, ಒಳ್ಳೇದೇನೂ ಬರಲಿಲ್ಲ; ಆರೋಗ್ಯದ ಸಮಯಕ್ಕೆ ಕಾದಿದ್ದೆವು; ಇಗೋ, ಕಳ ವಳವನ್ನು ನೋಡುತ್ತೇವೆ.

ಯೆರೆಮಿಯ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी