ನೀನು ಹೋಗಿ ಅವರಿಗೆ--ನಿಮ್ಮ ಡೇರೆಗಳಿಗೆ ತಿರುಗಿಕೊಳ್ಳಬೇಕು ಎಂದು ಹೇಳು.
28ನೀವು ನನ್ನ ಹತ್ತಿರ ಮಾತನಾಡಿದಾಗ ಕರ್ತನು ನಿಮ್ಮ ಮಾತುಗಳ ಶಬ್ದವನ್ನು ಕೇಳಿ ನನಗೆ--ಈ ಜನರು ನಿನಗೆ ಹೇಳಿದ ಮಾತುಗಳ ಶಬ್ದವನ್ನು ಕೇಳಿ ದ್ದೇನೆ. ಅವರು ಹೇಳಿದ್ದೆಲ್ಲಾ ಒಳ್ಳೇದು.
29ಅವರು ನನಗೆ ಭಯಪಟ್ಟು ನನ್ನ ಆಜ್ಞೆಗಳನ್ನೆಲ್ಲಾ ಎಂದೆಂದಿಗೂ ಕೈಕೊಳ್ಳುವಂಥ ಹೃದಯವು ಅವರಲ್ಲಿದ್ದರೆ ಎಷ್ಟೋ ಒಳ್ಳೇದು; ಆಗ ಅವರಿಗೂ ಅವರ ಮಕ್ಕಳಿಗೂ ಎಂದೆಂ ದಿಗೂ ಒಳ್ಳೆಯದಾಗುವದು.
30ನೀನು ಹೋಗಿ ಅವರಿಗೆ--ನಿಮ್ಮ ಡೇರೆಗಳಿಗೆ ತಿರುಗಿಕೊಳ್ಳಬೇಕು ಎಂದು ಹೇಳು.
31ನೀನಾದರೋ ಇಲ್ಲಿ ನನ್ನ ಸಂಗಡ ನಿಂತು ಕೋ; ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞೆ ನಿಯಮ ನ್ಯಾಯ ಗಳನ್ನು ನಿನಗೆ ಹೇಳುವೆನು ಅಂದನು.
32ಹೀಗಿರುವದರಿಂದ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದಂತೆ ಕೈಕೊಂಡು ನಡೆಯಬೇಕು; ಎಡಕ್ಕಾದರೂ ಬಲಕ್ಕಾದರೂ ತಿರುಗಬೇಡಿರಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ