ಯೆಶಾಯ 51:20

ನಿನ್ನ ಕುಮಾರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ ಎಲ್ಲಾ ಬೀದಿಗಳು ಕೂಡುವ ಚೌಕದಲ್ಲಿ ಅವರು ಬಿದ್ದಿದ್ದಾರೆ; ಅವರು ಕರ್ತನ ಉಗ್ರದಿಂದಲೂ ನಿನ್ನ ದೇವರ ಗದರಿಕೆ ಯಿಂದಲೂ ತುಂಬಿದ್ದಾರೆ.

ಸಂದರ್ಭದೊಂದಿಗೆ ಓದಿ · ಯೆಶಾಯ 51

18ಅವಳು ಹೆತ್ತ ಎಲ್ಲಾ ಕುಮಾರರಲ್ಲಿ ಅವಳನ್ನು ನಡಿಸುವದಕ್ಕೆ ಒಬ್ಬನೂ ಇಲ್ಲ; ಇಲ್ಲವೆ ಅವಳು ಬೆಳೆ ಸಿದ ಎಲ್ಲಾ ಕುಮಾರರಲ್ಲಿ ಅವಳ ಕೈಯನ್ನು ಹಿಡಿ ಯುವವನು ಒಬ್ಬನೂ ಇಲ್ಲ.

19ಈ ಎರಡು ಸಂಗತಿ ಗಳು ನಿನಗೆ ಸಂಭವಿಸಿವೆ; ನಿನಗೋಸ್ಕರ ಚಿಂತಿಸು ವವರು ಯಾರಿದ್ದಾರೆ? ನಾಶನವೋ ಸಂಹಾರವೋ ಕ್ಷಾಮವೋ ಕತ್ತಿಯೋ ನಾನು ಯಾರಿಂದ ನಿನ್ನನ್ನು ಆಧರಿಸಲಿ?

20ನಿನ್ನ ಕುಮಾರರು ಮೂರ್ಛೆ ಹೋಗಿ, ಬಲೆಗೆ ಸಿಕ್ಕಿದ ಕಾಡು ಗೂಳಿಗಳಂತೆ ಎಲ್ಲಾ ಬೀದಿಗಳು ಕೂಡುವ ಚೌಕದಲ್ಲಿ ಅವರು ಬಿದ್ದಿದ್ದಾರೆ; ಅವರು ಕರ್ತನ ಉಗ್ರದಿಂದಲೂ ನಿನ್ನ ದೇವರ ಗದರಿಕೆ ಯಿಂದಲೂ ತುಂಬಿದ್ದಾರೆ.

21ನೀನು ಹಿಂಸೆಗೊಳ ಗಾಗಿದ್ದೀ ಮತ್ತು ಕುಡಿದು ಅಮಲೇರಿದ್ದೀ. ಆದರೆ ದ್ರಾಕ್ಷಾರಸದಿಂದಲ್ಲ, ಆದದರಿಂದ ಈಗ ಇದನ್ನು ಕೇಳು,

22ತನ್ನ ಜನರಿಗೋಸ್ಕರ ವಾದಿಸುವ ನಿನ್ನ ದೇವರೂ ನಿನ್ನ ಕರ್ತನಾಗಿರುವ ಕರ್ತನೂ ಹೀಗನ್ನು ತ್ತಾನೆ--ಇಗೋ, ನಾನು ನಿನ್ನ ಕೈಯೊಳಗಿಂದ ತತ್ತರಿಸು ವಂಥ ಪಾತ್ರೆಯನ್ನೂ ನನ್ನ ಉಗ್ರವಾದ ಪಾತ್ರೆಯ ಮಡ್ಡಿಯನ್ನೂ ತೆಗೆದುಹಾಕಿದ್ದೇನೆ; ಇನ್ನು ಮೇಲೆ ನೀನು ಅದನ್ನು ತಿರಿಗಿ ಕುಡಿಯುವದೇ ಇಲ್ಲ.

ಯೆಶಾಯ 51 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी