ಯಾಜಕಕಾಂಡ 13:24

ಇಲ್ಲವೆ ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಹಸಿಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಮಚ್ಚೆಯಾಗಿದ್ದರೆ

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 13

22ಅದು ಚರ್ಮದ ಹೊರ ಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು, ಅದು ರೋಗವೇ.

23ಆದರೆ ಆ ಹೊಳಪಾದ ಮಚ್ಚೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.

24ಇಲ್ಲವೆ ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಹಸಿಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಮಚ್ಚೆಯಾಗಿದ್ದರೆ

25ಯಾಜಕನು ಆಗ ಅದನ್ನು ನೋಡ ಬೇಕು. ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡು ವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆ ಯಿಂದ ಒಡೆದ ಕುಷ್ಠವಾಗಿರುವದು; ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಕುಷ್ಠವ್ಯಾಧಿಯೇ.

26ಆದರೆ ಯಾಜಕನು ಅದನ್ನು ನೋಡಿದಾಗ ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೊಬ್ಬಾಗಿದ್ದರೆ ಯಾಜಕನು ಆಗ ಅವನನ್ನು ಏಳು ದಿನಗಳು ಮುಚ್ಚಿಡಬೇಕು.

ಯಾಜಕಕಾಂಡ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी