ನ್ಯಾಯಸ್ಥಾಪಕರು 20:4

ಯಾವನ ಹೆಂಡತಿ ಕೊಲ್ಲಲ್ಪಟ್ಟಳೋ ಆ ಪುರುಷನಾದ ಲೇವಿಯನು ಅವರಿಗೆ ಪ್ರತ್ಯುತ್ತರ ಕೊಟ್ಟು--ನಾನು ಬೆನ್ಯಾವಿಾನನ ಊರಾದ ಗಿಬೆಯಕ್ಕೆ ನನ್ನ ಉಪಪತ್ನಿ ಸಹಿತವಾಗಿ ಇಳುಕೊಳ್ಳು ವದಕ್ಕೆ ಬಂದೆನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 20

2ಇದಲ್ಲದೆ ಇಸ್ರಾಯೇಲಿನ ಸಮಸ್ತ ಗೋತ್ರಗಳಾದ ಸಮಸ್ತ ಜನರ ಮುಖ್ಯಸ್ಥರು ಬಿಚ್ಚು ಕತ್ತಿ ಹಿಡಿದುಕೊಂಡ ನಾಲ್ಕು ಲಕ್ಷ ಕಾಲಾಳುಗಳು ದೇವರ ಸಭೆಯಾದ ಜನರಲ್ಲಿಗೆ ಬಂದರು.

3ಇಸ್ರಾ ಯೇಲ್‌ ಮಕ್ಕಳು ಮಿಚ್ಪೆಗೆ ಬಂದ ವರ್ತಮಾನವನ್ನು ಬೆನ್ಯಾವಿಾನನ ಮಕ್ಕಳು ಕೇಳಿದರು). ಆಗ ಇಸ್ರಾ ಯೇಲ್‌ ಮಕ್ಕಳು--ನೀವು ಮಾತನಾಡಿರಿ; ಆ ಕೆಟ್ಟತನವು ಹೇಗೆ ಆಯಿತು? ಅಂದರು.

4ಯಾವನ ಹೆಂಡತಿ ಕೊಲ್ಲಲ್ಪಟ್ಟಳೋ ಆ ಪುರುಷನಾದ ಲೇವಿಯನು ಅವರಿಗೆ ಪ್ರತ್ಯುತ್ತರ ಕೊಟ್ಟು--ನಾನು ಬೆನ್ಯಾವಿಾನನ ಊರಾದ ಗಿಬೆಯಕ್ಕೆ ನನ್ನ ಉಪಪತ್ನಿ ಸಹಿತವಾಗಿ ಇಳುಕೊಳ್ಳು ವದಕ್ಕೆ ಬಂದೆನು.

5ಆದರೆ ಗಿಬೆಯ ಪಟ್ಟಣದವರು ನನಗೆ ವಿರೋಧವಾಗಿ ಎದ್ದು ನಾನು ಇಳಿದಿದ್ದ ಮನೆ ಯನ್ನು ರಾತ್ತಿಯಲ್ಲಿ ಮುತ್ತಿಕೊಂಡು ನನ್ನನ್ನು ಕೊಂದು ಹಾಕುವದಕ್ಕೆ ಆಲೋಚಿಸಿ ನನ್ನ ಉಪಪತ್ನಿಯನ್ನು ಕುಂದಿಸಿದರು; ಅವಳು ಸತ್ತುಹೋದಳು.

6ಅವರು ಇಸ್ರಾಯೇಲಿನಲ್ಲಿ ದುಷ್ಕರ್ಮವನ್ನೂ ಬುದ್ಧಿಹೀನವಾದ ಕೆಲಸವನ್ನೂ ಮಾಡಿದ್ದರಿಂದ ನಾನು ನನ್ನ ಉಪಪತ್ನಿ ಯನ್ನು ಹಿಡಿದು ಅವಳನ್ನು ಕಡಿದು ಇಸ್ರಾಯೇಲಿನ ಬಾಧ್ಯತೆಯಾದ ಸೀಮೆಯೆಲ್ಲಾದರಲ್ಲಿ ಕಳುಹಿಸಿದೆನು.

ನ್ಯಾಯಸ್ಥಾಪಕರು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी