ಯಾಜಕಕಾಂಡ 25:36

ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ಆದರೆ ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವ ರಿಗೆ ಭಯಪಡು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 25

34ಆದರೆ ಅವರ ಪಟ್ಟಣಗಳಿಗೆ ಸೇರಿರುವ ಉಪ ನಗರಗಳ ಹೊಲವನ್ನು ಮಾರಬಾರದು. ಅದು ಅವರಿಗೆ ನಿತ್ಯವಾದ ಸ್ವಾಸ್ತ್ಯವೇ.

35ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣನಾಗಿ ಬಿದ್ದುಕೊಂಡಿದ್ದರೆ ಅವನು ಪರಕೀಯ ನಾಗಿದ್ದರೂ ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿ ಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡ ಬೇಕು.

36ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ಆದರೆ ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವ ರಿಗೆ ಭಯಪಡು.

37ನೀನು ಅವನಿಗೆ ನಿನ್ನ ಹಣವನ್ನು ಬಡ್ಡಿಗೆ ಕೊಡಬಾರದು ಇಲ್ಲವೆ ಲಾಭಕ್ಕಾಗಿ ನಿನ್ನ ಆಹಾರ ವನ್ನು ಸಾಲವಾಗಿ ಕೊಡಬೇಡ.

38ನಿನಗೆ ಕಾನಾನ್‌ ದೇಶವನ್ನು ಕೊಡುವಂತೆಯೂ ನಿನಗೆ ದೇವರಾಗಿರು ವಂತೆಯೂ ನಿನ್ನನ್ನು ಐಗುಪ್ತದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಕರ್ತನು ನಾನೇ.

ಯಾಜಕಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी