ಆದಿಕಾಂಡ 47:1

ಯೋಸೇಫನು ಬಂದು ಫರೋಹನಿಗೆ-- ನನ್ನ ತಂದೆಯೂ ನನ್ನ ಸಹೋದರರೂ ತಮ್ಮ ಕುರಿ ದನಗಳನ್ನು ತಮಗಿದ್ದ ಎಲ್ಲವುಗಳನ್ನು ತೆಗೆದುಕೊಂಡು ಕಾನಾನ್‌ದೇಶದಿಂದ ಬಂದಿದ್ದಾರೆ. ಇಗೋ, ಅವರು ಗೋಷೆನ್‌ ಸೀಮೆಯಲ್ಲಿ ಇದ್ದಾರೆ ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 47

1ಯೋಸೇಫನು ಬಂದು ಫರೋಹನಿಗೆ-- ನನ್ನ ತಂದೆಯೂ ನನ್ನ ಸಹೋದರರೂ ತಮ್ಮ ಕುರಿ ದನಗಳನ್ನು ತಮಗಿದ್ದ ಎಲ್ಲವುಗಳನ್ನು ತೆಗೆದುಕೊಂಡು ಕಾನಾನ್‌ದೇಶದಿಂದ ಬಂದಿದ್ದಾರೆ. ಇಗೋ, ಅವರು ಗೋಷೆನ್‌ ಸೀಮೆಯಲ್ಲಿ ಇದ್ದಾರೆ ಅಂದನು.

2ತನ್ನ ಸಹೋದರರಲ್ಲಿ ಐದು ಮಂದಿಯನ್ನು ಕರಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು.

3ಫರೋಹನು ಯೋಸೇಫನ ಸಹೋದರರಿಗೆ--ನಿಮ್ಮ ಕೆಲಸವೇನು ಎಂದು ಕೇಳಿದಾಗ ಅವರು ಫರೋಹನಿಗೆ--ನಿನ್ನ ದಾಸರಾದ ನಾವೂ ನಮ್ಮ ತಂದೆಗಳೂ ಕುರಿಕಾಯುವವರಾಗಿದ್ದೇವೆ ಅಂದರು.

ಆದಿಕಾಂಡ 47 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी