ಲೂಕನು 17:22

ಆತನು ತನ್ನ ಶಿಷ್ಯರಿಗೆ--ಮನುಷ್ಯಕುಮಾರನ ದಿವಸಗಳಲ್ಲಿ ಒಂದನ್ನು ನೋಡಬೇಕೆಂದು ನೀವು ಅಪೇಕ್ಷಿಸಿದರೂ ಅದನ್ನು ನೋಡದಂಥ ದಿನಗಳು ಬರುವವು.

ಸಂದರ್ಭದೊಂದಿಗೆ ಓದಿ · ಲೂಕನು 17

20ದೇವರ ರಾಜ್ಯವು ಯಾವಾಗ ಬರುವದೆಂದು ಫರಿಸಾಯರು ಆತನನ್ನು ಕೇಳಲು ಆತನು ಅವರಿಗೆ ಪ್ರತ್ಯುತ್ತರವಾಗಿ--ದೇವರ ರಾಜ್ಯವು ಪ್ರತ್ಯಕ್ಷವಾಗಿ ಬರುವದಿಲ್ಲ.

21ಇದಲ್ಲದೆ--ಇಗೋ, ಇಲ್ಲಿದೆ! ಇಲ್ಲವೆ ಅಗೋ, ಅಲ್ಲಿದೆ ಎಂದು ಅವರು ಹೇಳುವದಕ್ಕಾಗು ವದಿಲ್ಲ; ಯಾಕಂದರೆ ಇಗೋ, ದೇವರ ರಾಜ್ಯವು ನಿಮ್ಮೊಳಗೆ ಇದೆ ಅಂದನು.

22ಆತನು ತನ್ನ ಶಿಷ್ಯರಿಗೆ--ಮನುಷ್ಯಕುಮಾರನ ದಿವಸಗಳಲ್ಲಿ ಒಂದನ್ನು ನೋಡಬೇಕೆಂದು ನೀವು ಅಪೇಕ್ಷಿಸಿದರೂ ಅದನ್ನು ನೋಡದಂಥ ದಿನಗಳು ಬರುವವು.

23ಅವರು ನಿಮಗೆ--ಇಲ್ಲಿ ನೋಡಿರಿ ಇಲ್ಲವೆ ಅಲ್ಲಿ ನೋಡಿರಿ ಎಂದು ಹೇಳಿದರೆ ಅಲ್ಲಿಗೆ ಹೋಗಬೇಡಿರಿ ಇಲ್ಲವೆ ಅವರನ್ನು ಹಿಂಬಾಲಿಸಬೇಡಿರಿ.

24ಯಾಕಂದರೆ ಮಿಂಚು ಆಕಾಶದ ಒಂದು ಭಾಗದಲ್ಲಿ ಮಿಂಚಿ ಆಕಾಶದ ಮತ್ತೊಂದು ಭಾಗದಲ್ಲಿ ಹೇಗೆ ಹೊಳೆಯುತ್ತದೆಯೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿ ಇರುವನು.

ಲೂಕನು 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी