ಆ ಸ್ತ್ರೀ ಉದಯ ಕಾಲಕ್ಕೆ ಮುಂಚೆ ಬಂದು ಬೆಳಕಾಗುವ ಮಟ್ಟಿಗೂ ಅಲ್ಲಿ ತನ್ನ ಯಜಮಾನನು ಇರುವ ಮನೆಯ ಬಾಗಿಲ ಬಳಿಯಲ್ಲಿ ಬಿದ್ದಿದ್ದಳು.
24ಇಗೋ, ಕನ್ನಿಕೆ ಯಾದ ನನ್ನ ಮಗಳನ್ನೂ ಅವನ ಉಪಪತ್ನಿಯನ್ನೂ ಹೊರಗೆ ತರುವೆನು; ನೀವು ಅವರನ್ನು ಕುಂದಿಸಿ ನಿಮಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡಿರಿ. ಆದರೆ ಈ ಮನುಷ್ಯನಿಗೆ ಅಂಥಾ ಬುದ್ಧಿಹೀನವಾದ ಕಾರ್ಯವನ್ನು ಮಾಡಬೇಡಿರಿ ಅಂದನು.
25ಆದರೆ ಆ ಮನುಷ್ಯರು ಅವನ ಮಾತನ್ನು ಕೇಳಲೊಲ್ಲದೆ ಹೋದರು. ಆದದರಿಂದ ಆ ಮನುಷ್ಯನು ತನ್ನ ಉಪ ಪತ್ನಿಯನ್ನು ಹಿಡಿದು ಹೊರಗೆ ಅವರ ಬಳಿಯಲ್ಲಿ ತಂದು ಬಿಟ್ಟನು; ಅವರು ಅವಳನ್ನು ತಿಳುಕೊಂಡು ಉದಯ ಕಾಲದ ಪರ್ಯಂತರ ರಾತ್ರಿಯೆಲ್ಲಾ ಅವಳನ್ನು ಕೆಡಿಸಿ ಉದಯವಾಗುವಾಗ ಅವಳನ್ನು ಬಿಟ್ಟುಬಿಟ್ಟರು.
26ಆ ಸ್ತ್ರೀ ಉದಯ ಕಾಲಕ್ಕೆ ಮುಂಚೆ ಬಂದು ಬೆಳಕಾಗುವ ಮಟ್ಟಿಗೂ ಅಲ್ಲಿ ತನ್ನ ಯಜಮಾನನು ಇರುವ ಮನೆಯ ಬಾಗಿಲ ಬಳಿಯಲ್ಲಿ ಬಿದ್ದಿದ್ದಳು.
27ಅವಳ ಯಜ ಮಾನನು ಉದಯದಲ್ಲಿ ಎದ್ದು ಮನೆಯ ಬಾಗಲನ್ನು ತೆರೆದು ತನ್ನ ಮಾರ್ಗವಾಗಿ ಹೊರಡುವಾಗ ಇಗೋ, ತನ್ನ ಉಪಪತ್ನಿ ಮನೆಯ ಬಾಗಿಲ ಮುಂದೆ ತನ್ನ ಕೈಗಳನ್ನು ಹೊಸ್ತಿಲ ಮೇಲೆ ಇಟ್ಟವಳಾಗಿ ಬಿದ್ದಿದ್ದಳು.
28ಆಗ ಅವನು ಅವಳಿಗೆ--ಏಳು, ಹೋಗೋಣ ಅಂದನು. ಆದರೆ ಪ್ರತ್ಯುತ್ತರವೇನೂ ಇಲ್ಲದೆ ಹೋಯಿತು. ಆಗ ಆ ಮನುಷ್ಯನು ಅವಳನ್ನು ಕತ್ತೆಯ ಮೇಲೆ ಹಾಕಿಕೊಂಡು ತನ್ನ ಸ್ಥಳಕ್ಕೆ ಹೋದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ