ಆದಿಕಾಂಡ 32:14

ಅವು ಯಾವವಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು;

ಸಂದರ್ಭದೊಂದಿಗೆ ಓದಿ · ಆದಿಕಾಂಡ 32

12ನಾನು --ನಿನಗೆ ಖಂಡಿತ ವಾಗಿ ಒಳ್ಳೆಯದನ್ನು ಮಾಡುವೆನು, ನಿನ್ನ ಸಂತತಿಯನ್ನು ಎಣಿಸುವದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು ಎಂದು ಹೇಳಿದಿಯಲ್ಲಾ ಎಂದು ಬೇಡಿಕೊಂಡನು.

13ಯಾಕೋಬನು ಅದೇ ರಾತ್ರಿಯಲ್ಲಿ ಅಲ್ಲಿ ಇಳುಕೊಂಡನು; ತಾನು ತಕ್ಕೊಂಡು ಬಂದವುಗಳಲ್ಲಿ ತನ್ನ ಸಹೋದರನಾದ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು.

14ಅವು ಯಾವವಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು;

15ಹಾಲು ಕೊಡುವ ಮೂವತ್ತು ಒಂಟೆಗಳು ಅವುಗಳ ಮರಿಗಳು, ನಾಲ್ವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಕತ್ತೆ ಮರಿಗಳು;

16ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನು ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ ಅವರಿಗೆ--ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳಬಿಡಿರಿ ಅಂದನು.

ಆದಿಕಾಂಡ 32 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी