ಆದರೆ ಅಂಥವುಗಳನ್ನು ಮಾಡುವವರ ಮೇಲೆ ಸತ್ಯಕ್ಕನುಸಾರವಾಗಿ ದೇವರ ನ್ಯಾಯತೀರ್ಪು ಇದೆಯೆಂದು ನಮಗೆ ನಿಶ್ಚಯವುಂಟು.
1ಆದದರಿಂದ ಓ ಮನುಷ್ಯನೇ, ತೀರ್ಪು ಮಾಡುವ ನೀನು ಯಾವನಾಗಿದ್ದರೂ ನೆವವಿಲ್ಲದವನಾಗಿದ್ದೀ; ಹೇಗೆಂದರೆ ಬೇರೊಬ್ಬನಿಗೆ ತೀರ್ಪು ಮಾಡುವ ನೀನು ಅಂಥವುಗಳನ್ನೇ ಮಾಡುವವ ನಾದ್ದರಿಂದ ನಿನ್ನಷ್ಟಕ್ಕೆ ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು.
2ಆದರೆ ಅಂಥವುಗಳನ್ನು ಮಾಡುವವರ ಮೇಲೆ ಸತ್ಯಕ್ಕನುಸಾರವಾಗಿ ದೇವರ ನ್ಯಾಯತೀರ್ಪು ಇದೆಯೆಂದು ನಮಗೆ ನಿಶ್ಚಯವುಂಟು.
3ಅಂಥವು ಗಳನ್ನು ಮಾಡುವವರಿಗೆ ತೀರ್ಪು ಮಾಡುವ ಓ ಮನುಷ್ಯನೇ, ಅವುಗಳನ್ನೇ ಮಾಡುವವನಾದ ನೀನು ದೇವರ ನ್ಯಾಯತೀರ್ಪಿನಿಂದ ತಪ್ಪಿಸಿಕೊಳ್ಳುತ್ತೇನೆಂದು ಯೋಚಿಸುತ್ತೀಯೋ?
4ಇಲ್ಲವೆ ದೇವರ ದಯೆಯು ನಿನ್ನನ್ನು ಮಾನಸಾಂತರಕ್ಕೆ ನಡಿಸುತ್ತದೆಯೆಂದು ನೀನು ತಿಳಿಯದೆ ಆತನ ಅಪಾರವಾದ ದಯೆ ಸಹನೆ ದೀರ್ಘ ಶಾಂತಿ ಇವುಗಳನ್ನು ಅಸಡ್ಡೆಮಾಡುತ್ತೀಯೋ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ