ಯೆಶಾಯ 42:22

ಆದರೆ ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ. ಅವರೆಲ್ಲರೂ ಹಳ್ಳ ಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ; ಸೆರೆಮನೆಗಳಲ್ಲಿ ಮುಚ್ಚಲ್ಪ ಟ್ಟಿದ್ದಾರೆ; ಅವರು ಸೂರೆಯಾದರೂ ತಪ್ಪಿಸುವವನು ಒಬ್ಬನೂ ಇಲ್ಲ, ಕೊಳ್ಳೆಯಾದದ್ದನ್ನು ತಿರಿಗಿ ಹಿಂದಕ್ಕೆ ಕೊಡು ಎಂದು ಹೇಳುವ ಒಬ್ಬನೂ ಇಲ್ಲ.

ಸಂದರ್ಭದೊಂದಿಗೆ ಓದಿ · ಯೆಶಾಯ 42

20ನೀನು ಅನೇಕ ಸಂಗತಿಗಳನ್ನು ಕಂಡಿದ್ದರೂ ನಿನಗೆ ಗಮನವಿಲ್ಲ; ಅವನ ಕಿವಿಗಳು ತೆರೆದಿದ್ದರೂ ಕೇಳನು.

21ಕರ್ತನು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು, ಆತನು ನ್ಯಾಯಪ್ರಮಾಣವನ್ನು ಹೆಚ್ಚಿಸಿ ಘನಪಡಿಸುವನು.

22ಆದರೆ ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ. ಅವರೆಲ್ಲರೂ ಹಳ್ಳ ಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ; ಸೆರೆಮನೆಗಳಲ್ಲಿ ಮುಚ್ಚಲ್ಪ ಟ್ಟಿದ್ದಾರೆ; ಅವರು ಸೂರೆಯಾದರೂ ತಪ್ಪಿಸುವವನು ಒಬ್ಬನೂ ಇಲ್ಲ, ಕೊಳ್ಳೆಯಾದದ್ದನ್ನು ತಿರಿಗಿ ಹಿಂದಕ್ಕೆ ಕೊಡು ಎಂದು ಹೇಳುವ ಒಬ್ಬನೂ ಇಲ್ಲ.

23ನಿಮ್ಮಲ್ಲಿ ಯಾರು ಇವುಗಳಿಗೆ ಕಿವಿಕೊಡುವರು, ಯಾರು ಇನ್ನು ಮುಂದೆ ಆಲಿಸಿ ಕೇಳುವರು?

24ಯಾಕೋಬನ್ನು ಸುಲಿಗೆಗೂ ಇಸ್ರಾಯೇಲನ್ನು ಕೊಳ್ಳೆಗೂ ಗುರಿಮಾಡಿ ದವನು ಯಾರು? ನಾವು ಯಾರಿಗೆ ವಿರೋಧವಾಗಿ ಪಾಪವನ್ನು ಮಾಡಿದೆವು, ಅದು ಕರ್ತನಿಗಲ್ಲವೇ? ಅವರು ಆತನ ಮಾರ್ಗದಲ್ಲಿ ನಡೆಯದೆ ಇಲ್ಲವೆ ಆತನ ನ್ಯಾಯಪ್ರಮಾಣಕ್ಕೆ ಅವಿಧೇಯರಾದರಲ್ಲಾ.

ಯೆಶಾಯ 42 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी