ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ದೇವರ ಮಂಜೂಷ ವನ್ನು ನನ್ನ ಮನೆಗೆ ತರಿಸುವದು ಹೇಗೆ ಅಂದನು.
10ಉಜ್ಜನು ಮಂಜೂಷಕ್ಕೆ ತನ್ನ ಕೈಯನ್ನು ಚಾಚಿದ್ದರಿಂದ ಕರ್ತನ ಕೋಪವು ಅವನ ಮೇಲೆ ಉರಿಯಿತು. ಆತನು ಅವನನ್ನು ಹತಮಾಡಿದನು; ಅವನು ಅಲ್ಲಿಯೇ ದೇವರ ಮುಂದೆ ಸತ್ತನು.
11ಕರ್ತನು ಉಜ್ಜನನ್ನು ಹರಿದು ಬಿಟ್ಟದ್ದರಿಂದ ದಾವೀದನಿಗೆ ಮೆಚ್ಚಿಗೆಯಾಗ ಲಿಲ್ಲ. ಆದಕಾರಣ ಇಂದಿನ ವರೆಗೂ ಆ ಸ್ಥಳಕ್ಕೆ ಪೆರೆಚ್ ಉಜ್ಜ ಎಂದು ಹೆಸರುಂಟು.
12ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ದೇವರ ಮಂಜೂಷ ವನ್ನು ನನ್ನ ಮನೆಗೆ ತರಿಸುವದು ಹೇಗೆ ಅಂದನು.
13ಹಾಗೆಯೇ ದಾವೀದನು ಮಂಜೂಷವನ್ನು ದಾವೀ ದನ ಪಟ್ಟಣಕ್ಕೆ ತನ್ನ ಬಳಿಗೆ ಸೇರಿಸಿಕೊಳ್ಳದೆ ಗಿತ್ತಿಯ ನಾದ ಒಬೇದೆದೋಮನ ಮನೆಗೆ ಸೇರಿಸಿಬಿಟ್ಟನು.
14ದೇವರ ಮಂಜೂಷವು ಒಬೇದೆದೋಮನ ಮನೆ ಯವರ ಸಂಗಡ ಅವನ ಮನೆಯಲ್ಲಿ ಮೂರು ತಿಂಗಳು ಇದ್ದದರಿಂದ ಕರ್ತನು ಒಬೇದೆದೋಮನ ಮನೆ ಯನ್ನೂ ಅವನಿಗಿದ್ದದ್ದೆಲ್ಲವನ್ನೂ ಆಶೀರ್ವದಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ