ಯೆಹೆಜ್ಕೇಲನು 41:22

ಮರದ ಯಜ್ಞ ವೇದಿಯು ಮೂರುಮೊಳ ಎತ್ತರವಾಗಿತ್ತು; ಉದ್ದವು ಎರಡು ಮೊಳವಾಗಿತ್ತು; ಅದರ ಮೂಲೆಗಳೂ ಉದ್ದವೂ ಪಾರ್ಶ್ವವೂ ಮರದಿಂದಲೇ ಮಾಡಲ್ಪಟ್ಟಿತ್ತು; ಅವನು ನನಗೆ ಹೇಳಿದ್ದೇನಂದರೆ--ಕರ್ತನ ಮುಂದೆ ಇರುವ ಮೇಜು ಇದೇ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 41

20ನೆಲವು ಮೊದಲುಗೊಂಡು ಬಾಗ ಲಿನ ಮೇಲಿನ ವರೆಗೂ ದೇವಾಲಯದ ಗೋಡೆ ಯಲ್ಲಿಯೂ ಕೆರೂಬಿಗಳೂ ಮತ್ತು ಖರ್ಜೂರದ ಮರಗಳೂ ಮಾಡಲ್ಪಟ್ಟಿದ್ದವು.

21ದೇವಾಲಯದ ಕಂಬ ಗಳು ಚಚ್ಚೌಕವಾಗಿದ್ದವು, ಪರಿಶುದ್ಧ ಸ್ಥಳವೂ ಸಹ ಹಾಗೆಯೇ ಇತ್ತು; ಒಂದು ಆಕಾರವು ಮತ್ತೊಂದು ಆಕಾರವನ್ನು ಹೋಲುತ್ತಿತ್ತು.

22ಮರದ ಯಜ್ಞ ವೇದಿಯು ಮೂರುಮೊಳ ಎತ್ತರವಾಗಿತ್ತು; ಉದ್ದವು ಎರಡು ಮೊಳವಾಗಿತ್ತು; ಅದರ ಮೂಲೆಗಳೂ ಉದ್ದವೂ ಪಾರ್ಶ್ವವೂ ಮರದಿಂದಲೇ ಮಾಡಲ್ಪಟ್ಟಿತ್ತು; ಅವನು ನನಗೆ ಹೇಳಿದ್ದೇನಂದರೆ--ಕರ್ತನ ಮುಂದೆ ಇರುವ ಮೇಜು ಇದೇ ಎಂದು ಹೇಳಿದನು.

23ದೇವಾ ಲಯಕ್ಕೂ ಪರಿಶುದ್ಧ ಸ್ಥಳಕ್ಕೂ ಎರಡು ಬಾಗಲುಗಳಿ ದ್ದವು.

24ಆ ಎರಡು ಬಾಗಲುಗಳಿಗೆ ಎರಡು ಕದಗಳಿ ದ್ದವು, ಆ ಸುತ್ತಿಕೊಳ್ಳುವ ಕದಗಳು ಒಂದು ಬಾಗಲಿಗೆ ಎರಡು ಇನ್ನೊಂದು ಬಾಗಲಿಗೆ ಎರಡು ಇದ್ದವು.

ಯೆಹೆಜ್ಕೇಲನು 41 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी