ಯೆಶಾಯ 58:2

ಆದಾಗ್ಯೂ ಅವರು ನನ್ನನ್ನು ಪ್ರತಿನಿತ್ಯವೂ ಹುಡುಕು ತ್ತಾರೆ. ನನ್ನ ಮಾರ್ಗಗಳನ್ನು ತಿಳಿದುಕೊಳ್ಳುವದರಲ್ಲಿ ಸಂತೋಷಪಡುತ್ತಾರೆ. ತನ್ನ ದೇವರ ನ್ಯಾಯವನ್ನು ಬಿಡದೆ ನೀತಿಯನ್ನಾಚರಿಸುವ ಜನಾಂಗದ ಹಾಗೆಯೇ ನೀತಿಯುಳ್ಳ ನ್ಯಾಯಗಳನ್ನು ನನ್ನಿಂದ ಕೇಳುತ್ತಾರೆ. ದೇವರನ್ನು ಸವಿಾಪಿಸುವದರಲ್ಲಿ ಸಂತೋಷಿಸುತ್ತಾರೆ.

ಸಂದರ್ಭದೊಂದಿಗೆ ಓದಿ · ಯೆಶಾಯ 58

1ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು, ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನೂ ತೋರಿಸು.

2ಆದಾಗ್ಯೂ ಅವರು ನನ್ನನ್ನು ಪ್ರತಿನಿತ್ಯವೂ ಹುಡುಕು ತ್ತಾರೆ. ನನ್ನ ಮಾರ್ಗಗಳನ್ನು ತಿಳಿದುಕೊಳ್ಳುವದರಲ್ಲಿ ಸಂತೋಷಪಡುತ್ತಾರೆ. ತನ್ನ ದೇವರ ನ್ಯಾಯವನ್ನು ಬಿಡದೆ ನೀತಿಯನ್ನಾಚರಿಸುವ ಜನಾಂಗದ ಹಾಗೆಯೇ ನೀತಿಯುಳ್ಳ ನ್ಯಾಯಗಳನ್ನು ನನ್ನಿಂದ ಕೇಳುತ್ತಾರೆ. ದೇವರನ್ನು ಸವಿಾಪಿಸುವದರಲ್ಲಿ ಸಂತೋಷಿಸುತ್ತಾರೆ.

3ನಾವು ಉಪವಾಸ ಮಾಡಿದ್ದೇವೆ, ನೀನು ಯಾಕೆ ನೋಡುವದಿಲ್ಲ? ನಮ್ಮ ಪ್ರಾಣವನ್ನು ಕುಂದಿಸಲು ನೀನು ಗಮನಿಸದಿರುವದೇಕೆ ಎಂದು ಅವರು ಅಂದು ಕೊಳ್ಳುತ್ತಾರೆ; ಇಗೋ, ನಿಮ್ಮ ಉಪವಾಸದ ದಿನದಲ್ಲಿ ನಿಮ್ಮ ಇಷ್ಟವನ್ನು ತೀರಿಸುತ್ತೀರಿ ಮತ್ತು ನಿಮ್ಮ ಎಲ್ಲಾ ದುಡಿತವನ್ನು ನಿರ್ಬಂಧಿಸುತ್ತೀರಿ.

4ಇಗೋ, ವ್ಯಾಜ್ಯ ಕ್ಕೂ ಹೋರಾಟಕ್ಕೂ ದುಷ್ಟತ್ವದ ಮುಷ್ಟಿಯಿಂದ ಹೊಡೆಯುವದಕ್ಕೂ ನೀವು ಉಪವಾಸಮಾಡುತ್ತೀರಿ. ನಿಮ್ಮ ಸ್ವರವು ಮೇಲಕ್ಕೆ ಕೇಳಿಸುವಂತೆ ಈ ದಿವಸ ಉಪವಾಸ ಮಾಡಿದ ಹಾಗೆ ನೀವು ಮಾಡಬೇಡಿರಿ.

ಯೆಶಾಯ 58 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी