೨ ಸಮುವೇಲನು 20:5

ಹಾಗೆಯೇ ಅಮಾಸನು ಯೆಹೂದದ ಜನರನ್ನು ಕೂಡಿಸಲು ಹೋದನು; ಆದರೆ ಅವನು ತನಗೆ ನೇಮಿಸಿದ ಕಾಲದಲ್ಲಿ ಬಾರದೆ ಆಲಸ್ಯ ಮಾಡಿದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 20

3ದಾವೀದನು ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ಬಂದನು; ಅರಸನು ಮನೆಯಲ್ಲಿ ಕಾಯಲಿಟ್ಟ ಉಪಪತ್ನಿಗಳಾದ ಹತ್ತುಮಂದಿ ಸ್ತ್ರೀಯರನ್ನು ತೆಗೆದು ಕೊಂಡು ಅವರನ್ನು ಒಂದು ಕಾವಲಿನಲ್ಲಿ ಇರಿಸಿ ಸಾಕುತ್ತಿದ್ದನು. ಆದರೆ ಅವರನ್ನು ತಿರುಗಿ ಕೂಡಲಿಲ್ಲ. ಹಾಗೆಯೇ ಅವರು ಸಾಯುವ ದಿವಸದ ವರೆಗೂ ಕಾವಲಲ್ಲಿ ಇರಿಸಲ್ಪಟ್ಟು ವಿಧವೆಯರ ಹಾಗೆಯೇ ಬದುಕಿದರು.

4ಅರಸನು ಅಮಾಸನಿಗೆ--ನೀನು ಮೂರು ದಿವಸ ಗಳೊಳಗೆ ಯೆಹೂದ ಜನರನ್ನು ಕೂಡಿಸಿಕೊಂಡು ಇಲ್ಲಿ ಇರು ಅಂದನು.

5ಹಾಗೆಯೇ ಅಮಾಸನು ಯೆಹೂದದ ಜನರನ್ನು ಕೂಡಿಸಲು ಹೋದನು; ಆದರೆ ಅವನು ತನಗೆ ನೇಮಿಸಿದ ಕಾಲದಲ್ಲಿ ಬಾರದೆ ಆಲಸ್ಯ ಮಾಡಿದನು.

6ಆದದರಿಂದ ದಾವೀದನು ಅಬೀಷೈಗೆಈಗ ಅಬ್ಷಾಲೋಮನಿಗಿಂತ ಬಿಕ್ರಿಯ ಮಗನಾದ ಶೆಬನು ನಮಗೆ ಹೆಚ್ಚಿನ ಕೇಡನ್ನು ಮಾಡುವನು. ಅವನು ತನಗೆ ಗಡಿ ಸ್ಥಳಗಳಾದ ಪಟ್ಟಣಗಳನ್ನು ಸಂಪಾ ದಿಸಿಕೊಂಡು ನಮ್ಮಿಂದ ತಪ್ಪಿಸಿಕೊಳ್ಳದ ಹಾಗೆ ನೀನು ನಿನ್ನ ಯಜಮಾನನ ಸೇವಕರನ್ನು ತಕ್ಕೊಂಡು ಹೊರಟು ಅವನನ್ನು ಹಿಂದಟ್ಟು ಅಂದನು.

7ಹಾಗೆಯೇ ಅವನ ಹಿಂದೆ ಯೋವಾಬನ ಜನರೂ ಕೆರೇತ್ಯರೂ ಪೆಲೇ ತ್ಯರೂ ಎಲ್ಲಾ ಪರಾಕ್ರಮಶಾಲಿಗಳೂ ಬಿಕ್ರಿಯ ಮಗ ನಾದ ಶೆಬನನ್ನು ಹಿಂದಟ್ಟಲು ಯೆರೂಸಲೇಮಿನಿಂದ ಹೊರಟರು.

೨ ಸಮುವೇಲನು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी