ವಿಮೋಚನಕಾಂಡ 22:6

ಬೆಂಕಿ ಹತ್ತಿ ಅದು ಮುಳ್ಳಿನ ಬೇಲಿಗೆ ತಗುಲಿ ಸಿವುಡುಗಳ ಬಣವಿಗಳನ್ನಾಗಲಿ ನಿಂತ ಬೆಳೆಯನ್ನಾಗಲಿ ಹೊಲವನ್ನಾಗಲಿ ಸುಟ್ಟುಬಿಟ್ಟರೆ ಆ ಬೆಂಕಿಯನ್ನು ಹಚ್ಚಿದ ವನು ಖಂಡಿತವಾಗಿ ಬದಲು ಕೊಡಬೇಕು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 22

4ಕಳ್ಳತನ ಮಾಡಿದ ಎತ್ತಾಗಲಿ ಕತ್ತೆಯಾಗಲಿ ಕುರಿಯಾಗಲಿ ಕದ್ದವನ ಬಳಿಯಲ್ಲಿ ಜೀವವುಳ್ಳದ್ದಾಗಿ ನಿಜವಾಗಿ ಸಿಕ್ಕಿದರೆ ಅವನು ಎರಡರಷ್ಟು ತಿರಿಗಿ ಕೊಡಬೇಕು.

5ಒಬ್ಬನು ಇನ್ನೊಬ್ಬನ ಹೊಲದಲ್ಲಿ ತನ್ನ ಪಶುಗಳನ್ನು ಬಿಟ್ಟು ಬೆಳೆಯನ್ನೂ ದ್ರಾಕ್ಷೇತೋಟವನ್ನೂ ಮೇಯಿಸಿ ದರೆ ಅವನು ತನ್ನ ಸ್ವಂತ ಹೊಲದ ಉತ್ತಮ ಭಾಗವನ್ನೂ ದ್ರಾಕ್ಷೇತೋಟದಲ್ಲಿ ಉತ್ತಮವಾದದ್ದನ್ನೂ ಬದಲು ಕೊಡಬೇಕು.

6ಬೆಂಕಿ ಹತ್ತಿ ಅದು ಮುಳ್ಳಿನ ಬೇಲಿಗೆ ತಗುಲಿ ಸಿವುಡುಗಳ ಬಣವಿಗಳನ್ನಾಗಲಿ ನಿಂತ ಬೆಳೆಯನ್ನಾಗಲಿ ಹೊಲವನ್ನಾಗಲಿ ಸುಟ್ಟುಬಿಟ್ಟರೆ ಆ ಬೆಂಕಿಯನ್ನು ಹಚ್ಚಿದ ವನು ಖಂಡಿತವಾಗಿ ಬದಲು ಕೊಡಬೇಕು.

7ಒಬ್ಬನು ತನ್ನ ನೆರೆಯವನಿಗೆ ತನ್ನ ಹಣವನ್ನಾಗಲಿ ಸಾಮಾನುಗಳನ್ನಾಗಲಿ ಇಟ್ಟುಕೊಳ್ಳುವದಕ್ಕೆ ಕೊಟ್ಟಾಗ ಅದು ಅವನ ಮನೆಯಿಂದ ಕಳ್ಳತನವಾಗಿ ಆ ಕಳ್ಳನು ಸಿಕ್ಕಿದರೆ ಅವನು ಎರಡರಷ್ಟು ಕೊಡಬೇಕು.

8ಕಳ್ಳನು ಸಿಕ್ಕದೆ ಹೋದರೆ ಮನೆಯ ಯಜಮಾನನು ತನ್ನ ನೆರೆಯವನ ಸಾಮಾನುಗಳನ್ನು ಅವನು ಮುಟ್ಟಲಿಲ್ಲ ವೆಂದು ವಿಚಾರಿಸುವದಕ್ಕೆ ನ್ಯಾಯಾಧಿಪತಿಗಳ ಬಳಿಗೆ ಅವನನ್ನು ಬರಮಾಡಬೇಕು.

ವಿಮೋಚನಕಾಂಡ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी