೧ ಸಮುವೇಲನು 11:11

ಆದರೆ ಮಾರನೇ ದಿವಸದಲ್ಲಿ ಸೌಲನು ಜನರನ್ನು ಮೂರು ಗುಂಪಾಗಿ ಇರಿಸಿ ಬೆಳಗಿನ ಜಾವ ದಂಡಿನಲ್ಲಿ ಬಂದು ಬಿಸಿಲೇರುವವರೆಗೆ ಅಮ್ಮೋನಿಯ ರನ್ನು ಸಂಹರಿಸಿದನು. ಉಳಿದವರು ಚದರಿಹೋದರು; ಅವರಲ್ಲಿ ಒಬ್ಬರೂ ಕೂಡ ಇರಲಿಲ್ಲ.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 11

9ಆಗ ಅವರು ಬಂದ ದೂತರಿಗೆ--ನೀವು ಗಿಲ್ಯಾದಿನ ಲ್ಲಿರುವ ಯಾಬೇಷಿನ ಜನರಿಗೆ--ನಾಳೆ ಬಿಸಿಲೇರಿದಾಗ ನಿಮಗೆ ಸಹಾಯ ಉಂಟಾಗುವದು ಅಂದರು. ಹಾಗೆಯೇ ದೂತರು ಬಂದು ಯಾಬೇಷಿನ ಜನರಿಗೆ ಅದನ್ನು ತಿಳಿಸಿದಾಗ ಅವರು ಸಂತೋಷಪಟ್ಟರು.

10ತರುವಾಯ ಯಾಬೇಷಿನ ಜನರು ನಾಹಾಷನಿಗೆ--ನಾಳೆ ನಿನ್ನ ಬಳಿಗೆ ಹೊರಟು ಬರುವೆವು; ಆಗ ನಿನಗೆ ಒಳ್ಳೇದಾಗಿ ತೋರುವದನ್ನೆಲ್ಲಾ ನಮಗೆ ಮಾಡು ಅಂದರು.

11ಆದರೆ ಮಾರನೇ ದಿವಸದಲ್ಲಿ ಸೌಲನು ಜನರನ್ನು ಮೂರು ಗುಂಪಾಗಿ ಇರಿಸಿ ಬೆಳಗಿನ ಜಾವ ದಂಡಿನಲ್ಲಿ ಬಂದು ಬಿಸಿಲೇರುವವರೆಗೆ ಅಮ್ಮೋನಿಯ ರನ್ನು ಸಂಹರಿಸಿದನು. ಉಳಿದವರು ಚದರಿಹೋದರು; ಅವರಲ್ಲಿ ಒಬ್ಬರೂ ಕೂಡ ಇರಲಿಲ್ಲ.

12ಆಗ ಜನರು ಸಮುವೇಲನಿಗೆ--ಸೌಲನು ನಮ್ಮ ಮೇಲೆ ಆಳುವನೋ ಎಂದು ಹೇಳಿದವರಾರು? ಆ ಮನುಷ್ಯರನ್ನು ನಮಗೆ ಒಪ್ಪಿಸಿರಿ; ಅವರನ್ನು ಕೊಂದು ಹಾಕುತ್ತೇವೆ ಅಂದರು.

13ಆಗ ಸೌಲನು--ಕರ್ತನು ಈ ದಿವಸ ಇಸ್ರಾಯೇಲಿನಲ್ಲಿ ರಕ್ಷಣೆಯನ್ನುಂಟುಮಾಡಿ ದ್ದರಿಂದ ಈ ಹೊತ್ತು ಯಾವನೂ ಕೊಲ್ಲಲ್ಪಡಬಾರದು ಅಂದನು.

೧ ಸಮುವೇಲನು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी