೨ ಸಮುವೇಲನು 14:25

ಎಲ್ಲಾ ಇಸ್ರಾಯೇಲ್ಯರಲ್ಲಿ ಬಹಳ ಹೊಗಳಲ್ಪ ಡತಕ್ಕ ಅಬ್ಷಾಲೋಮನಿಗೆ ಸಮಾನನಾದ ಸೌಂದರ್ಯ ವುಳ್ಳವನು ಒಬ್ಬನೂ ಇರಲಿಲ್ಲ. ಅವನ ಅಂಗಾಲು ಮೊದಲ್ಗೊಂಡು ನಡುನೆತ್ತಿಯ ವರೆಗೂ ಅವನಲ್ಲಿ ಒಂದು ಕಳಂಕವಾದರೂ ಇಲ್ಲದೆ ಇತ್ತು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 14

23ಹಾಗೆಯೇ ಯೋವಾಬನು ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇಮಿಗೆ ಕರಕೊಂಡು ಬಂದನು.

24ಆದರೆ ಅರಸನು--ಅವನು ತನ್ನ ಮನೆಗೆ ತಿರುಗಿ ಹೋಗಲಿ; ಅವನು ನನ್ನ ಮುಖವನ್ನು ನೋಡಬಾರದು ಅಂದನು. ಆದದರಿಂದ ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ತನ್ನ ಮನೆಗೆ ತಿರುಗಿ ಹೋದನು.

25ಎಲ್ಲಾ ಇಸ್ರಾಯೇಲ್ಯರಲ್ಲಿ ಬಹಳ ಹೊಗಳಲ್ಪ ಡತಕ್ಕ ಅಬ್ಷಾಲೋಮನಿಗೆ ಸಮಾನನಾದ ಸೌಂದರ್ಯ ವುಳ್ಳವನು ಒಬ್ಬನೂ ಇರಲಿಲ್ಲ. ಅವನ ಅಂಗಾಲು ಮೊದಲ್ಗೊಂಡು ನಡುನೆತ್ತಿಯ ವರೆಗೂ ಅವನಲ್ಲಿ ಒಂದು ಕಳಂಕವಾದರೂ ಇಲ್ಲದೆ ಇತ್ತು.

26ಅವನು ತನ್ನ ತಲೆಯ ಕೂದಲು ಭಾರವಾಗಿದೆ ಎಂದು ಪ್ರತಿವರುಷದ ಕೊನೆಯಲ್ಲಿ ಬೋಳಿಸಿಕೊಳ್ಳುವನು; ಬೋಳಿಸಿಕೊಳ್ಳುವಾಗ ಅವನ ತಲೆಯ ಕೂದಲು ಅರಸನ ತೂಕದ ಪ್ರಕಾರ ಇನ್ನೂರು ಶೆಕೇಲು ತೂಕವಾಗಿರುವದು.

27ಅಬ್ಷಾಲೋಮನಿಗೆ ಮೂರು ಮಂದಿ ಕುಮಾರರೂ ತಾಮಾರ್‌ ಎಂಬ ಒಬ್ಬ ಕುಮಾರ್ತೆಯೂ ಹುಟ್ಟಿದರು. ಇವಳು ಸೌಂದರ್ಯ ವುಳ್ಳ ಸ್ತ್ರೀಯಾಗಿದ್ದಳು.

೨ ಸಮುವೇಲನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी